logo
WhatsApp Image 2026-04-02 at 14.46.04.jpeg
hindalco everlast.jpeg

ಎಂಸಿಸಿ ಬ್ಯಾಂಕಿನಲ್ಲಿ 114ನೇ ಸಂಸ್ಥಾಪಕರ ದಿನಾಚರಣೆ

ಟ್ರೆಂಡಿಂಗ್
share whatsappshare facebookshare telegram
10 May 2026
post image

ಮಂಗಳೂರು: ಎಂಸಿಸಿ ಬ್ಯಾಂಕ್ ಲಿಮಿಟೆಡ್ ತನ್ನ 114ನೇ ಸಂಸ್ಥಾಪಕರ ದಿನಾಚರಣೆಯನ್ನು ಆಡಳಿತ ಕಚೇರಿ ಆವರಣದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಂಸ್ಥಾಪಕ ಪಿ.ಎಫ್.ಎಕ್ಸ್.ಸಲ್ದಾನರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರ ದೂರದೃಷ್ಟಿಯ ಸೇವೆಯನ್ನು ಸ್ಮರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಕಾರ ರತ್ನ ಅನಿಲ್ ಲೋಬೊ, ‘2018ರಲ್ಲಿ ಹೊಸ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ನಂತರ ಬ್ಯಾಂಕ್ ವೃತ್ತಿಪರತೆಯೊಂದಿಗೆ ಗಮನಾರ್ಹ ಬೆಳವಣಿಗೆ ಸಾಧಿಸಿದೆ ಎಂದರು.

24 ವರ್ಷಗಳ ಬಳಿಕ ಶಾಖೆಗಳ ಸಂಖ್ಯೆ 16ರಿಂದ 21ಕ್ಕೆ ಏರಿಕೆಯಾಗಿದೆ. ಬ್ಯಾಂಕಿನ ಒಟ್ಟು ವ್ಯವಹಾರ ರೂ.500 ಕೋಟಿಯಿಂದ ರೂ.1,525 ಕೋಟಿಗೆ ಏರಿಕೆಯಾಗಿದ್ದು, ಠೇವಣಿಗಳು 300 ಕೋಟಿ ರೂ.ನಿಂದ ರೂ.875 ಕೋಟಿಗೆ ಹೆಚ್ಚಳವಾಗಿವೆ. ಬ್ಯಾಂಕ್ ರೂ.13 ಕೋಟಿ ಲಾಭ ದಾಖಲಿಸಿದ್ದು, ನಿರಂತರವಾಗಿ ‘‘ಎ’’ ದರ್ಜೆಯ ಲೆಕ್ಕ ಪರಿಶೋಧನಾ ವರ್ಗೀಕರಣವನ್ನು ಪಡೆಯುತ್ತಿದೆ. ಈಗ ಇರುವ 21 ಶಾಖೆಗಳನ್ನು ಈ ಆರ್ಥಿಕ ವರ್ಷದಲ್ಲಿ 25ಕ್ಕೆ ಏರಿಸಲಾಗುವುದು ಎಂದು ಮಾಹಿತಿ ನೀಡಿದರು.

ಸೈಂಟ್ ಅಲೋಶಿಯಸ್ ಪರಿಗಣಿತ ವಿವಿ ಉಪಕುಲಪತಿ ಫಾ.ಡಾ.ಪ್ರವೀಣ್ ಮಾರ್ಟಿಸ್ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ನೆರವಾಗುವ ಬ್ಯಾಂಕ್ನ ‘ವಿದ್ಯಾಧನ ವಿದ್ಯಾರ್ಥಿ ಕ್ರೆಡಿಟ್ ಯೋಜನೆ’ಯನ್ನು ಶ್ಲಾಘಿಸಿದರು.

ಕರ್ಣಾಟಕ ಬ್ಯಾಂಕ್ನ ಮಾಜಿ ಮಹಾಪ್ರಬಂಧಕ ಡಾ.ಮೀರಾ ಅರನ್ಹಾ ‘ವಿದ್ಯಾಧನ ಶಿಕ್ಷಣ ಯೋಜನೆ’ಯನ್ನು ಉದ್ಘಾಟಿಸಿದರು.

ಮಂಗಳೂರು ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ರಚನಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷ ರಾಯ್ ಕ್ಯಾಸ್ಟೆಲಿನೋ, ಕೆನರಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿಯ ಮಾಜಿ ಅಧ್ಯಕ್ಷ ಐಸಾಕ್ ವಾಸ್ ಅವರು ಸಂಪಾದಕ ಡಾ.ಜೆರಾಲ್ಡ್ ಪಿಂಟೊ ಅವರೊಂದಿಗೆ ಬ್ಯಾಂಕಿನ ಬುಲೆಟಿನ್ ಬಿಡುಗಡೆಗೊಳಿಸಿದರು.

ಬ್ಯಾಂಕಿನ ನಿರ್ದೇಶಕರಾದ ಆಂಡ್ರೂ ಡಿಸೋಜ, ಹೆರಾಲ್ಡ್ ಮೊಂತೇರೊ, ಡೇವಿಡ್ ಡಿಸೋಜ, ಜೆ.ಪಿ. ರೋಡ್ರಿಗಸ್, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸುಶಾಂತ್ ಸಲ್ದಾನ, ಐರಿನ್ ರೆಬೆಲ್ಲೊ, ಆಲ್ವಿನ್ ಪಿ. ಮೊಂತೇರೊ, ಫೆಲಿಕ್ಸ್ ಡಿ ಕ್ರೂಜ್, ಡಾ.ಜೆರಾಲ್ಡ್ ಪಿಂಟೊ ಹಾಗೂ ಸಿ.ಜಿ. ಪಿಂಟೊ ಉಪಸ್ಥಿತರಿದ್ದರು.

ನೂತನ ಚಾರ್ಟರ್ಡ್ ಅಕೌಂಟೆಂಟ್ಸ್ಗಳಾದ ಸಿಎ ಮ್ಯೂರಿಯಲ್ ಮಸ್ಕರೇನಸ್ ಹಾಗೂ ಸಿಎ ಜಾಯ್ಸಟನ್ ಡಿಸೋಜ , ಕೇಂದ್ರ ಸೆಂಟ್ರಲ್ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಪುರಸ್ಕೃತ ಹೆನ್ರಿ

ಮೆಂಡೋನ್ಸ (ಎಚ್.ಎಂ. ಪೆರ್ನಾಲ್), ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ರಿಶೆಲ್ ಫೆರ್ನಾಂಡಿಸ್ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಜೋಸೆಫ್ ಲೋಬೊ,

ಝೇವಿಯರ್ ಡಿಸೋಜ ಮತ್ತು ಪ್ರೇಮ್ ಜೆ. ಮೊರಾಸ್, ನಿರ್ದೇಶಕರಾದ ರೋಶನ್ ಡಿಸೋಜ ಹಾಗೂ ಅನಿಲ್ ಪತ್ರಾವೊ, ಹೊಸ ಲೋಗೋ ವಿನ್ಯಾಸಗೊಳಿಸಿದ ಬನ್ನು ಫೆರ್ನಾಂಡಿಸ್ ಹಾಗೂ

ಪಿಎಫ್ಎಕ್ಸ್ ಮೆಮೋರಿಯಲ್ ಆಡಿಟೋರಿಯಂ ವಿನ್ಯಾಸಗೊಳಿಸಿದ ವಾಸ್ತುಶಿಲ್ಪಿ ದೀಪಕ್ ಡಿಸೋಜರನ್ನು ಗೌರವಿಸಲಾಯಿತು.

ಕಾರ್ಯಕ್ರಮವು ಮನೋಜ್ ಲೋಪೆಝ್ ಮತ್ತು ತಂಡದವರು ಪ್ರಾರ್ಥಿಸಿದರು. ಬ್ಯಾಂಕಿನ ಮಹಾಪ್ರಬಂಧಕ ಸುನೀಲ್ ಮಿನೇಜಸ್ ವಂದಿಸಿದರು.

ಸಲ್ಲಿಸಿದರು. ಜೇಸನ್ ಶಿರ್ತಾಡಿ ಕಾರ್ಯಕ್ರಮ ನಿರೂಪಿಸಿದರು.

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.