ಮಳೆಯ ಜೊತೆ ಕಳೆದ ಕ್ಷಣ
ಸುಶಾಂತ್ ದೇವಾಡಿಗ ಪತ್ರಿಕೋದ್ಯಮ ವಿಭಾಗ ಎಂ ಪಿ ಎಂ ಕಾರ್ಕಳ
ಮೋಡ ಕಟ್ಟಿದ ಕೂಡಲೇ ನನ್ನ ಮನಸ್ಸಿನಲ್ಲಿ ಒಂಥರಾ ಖುಷಿ ಪುಟಿದೇಳುತ್ತದೆ. ಕಾತರಿಸುತಿದ್ದ ಮಳೆ ಸುರಿಯಲು ಆರಂಭವಾದಾಗ ಮನಸ್ಸಿನ ಖುಷಿ ಗೆ ಪಾರವೇ ಇಲ್ಲ. ನನಗೆ ಮಳೆಗಾಲ ಎಂದರೆ ಒಂದು ರೀತಿಯ ಸಂತಸತ. ಮಳೆಯಲ್ಲಿ ಆಟ ಆಡುವುದು ಮತ್ತು ಇತರ ಹಲವು ಕ್ಷಣಗಳು ಮಳೆ ಬರುವ ಸಂದರ್ಭಗಳಲ್ಲಿ ನೆನಪುಗಳ ಬುತ್ತಿ ತೆರೆದಂತೆ. ಜೋರು ಅದ ಮಳೆ ಸುರಿಯುವಾಗ ಏನು ಒಂದು ಬಿಸಿ ಬಿಸಿಯಾದ ಕಾಫಿ, ಬಜ್ಜಿ, ಕುಡಿಯುವ ಅನಿಸುತ್ತೆ ಅಲ್ವಾ. ಒಂದು ಕಡೆಯಲ್ಲಿ ಮಳೆ ಇನ್ನೊಂದು ಕಡೆ ಕೈಯಲ್ಲಿ ಕಾಫಿ.ತಣ್ಣನೆಯ ಗಾಳಿ ಒಂದು ಮೈ ಚುಮ್ಮಿಸುವ ವಾತಾವರಣ ಈ ಕ್ಷಣಕ್ಕೆ ನಮ್ಮ ಬಾಯಿಯಲ್ಲಿ ಮಧುರವಾದ ಹಾಡು ನಾವು ಸಿಂಗರ್ ಅಲ್ಲದೆ ಇದ್ದರು ಅ ಕ್ಷಣಕ್ಕೆ ಹಾಡು ಬಂದೆ ಬರತ್ತೆ. ಮನೆಯಲ್ಲಿ ಎಲ್ಲರೂ ಒಂದಾಗಿ ಸೇರಿಕೊಂಡು ಇರುತ್ತೇವೆ ಅದು ಒಂದು ಖುಷಿ ಯಾವ ಯಾವ ಸುದ್ದಿ ಯಾರ ಮನೆಯ ವಿಚಾರ, ಹರಟೆ ಗದ್ದಲಗಳಿಂದ ಸೇರಿರುತ್ತೇವೆ . ದೊಡ್ಡವರ ಒಂದು ಕಡೆಯಲ್ಲಿ ಮಾತುಕಥೆಯಾದರೆ ಇಲ್ಲಿ ಮಕ್ಕಳ ಹರಟೆ ಶಾಲೆಯಲ್ಲಿ ನಡೆದ ತುಂಟಾಟ ಸಣ್ಣ ಸಣ್ಣ ವಿಷಯಕ್ಕೂ ಗಲಾಟೆ ಮಾಡಿಕೊಂಡ ವಿಚಾರ ಹೇಳಿಕೊಂಡು ಮುಗುಳ್ನಗೆ ನಾವು ಇರುವಾಗ ಶಾಲೆಯಲ್ಲಿ ಹಾಗೆ ಇತ್ತು ಹೀಗೆ ಇತ್ತು ನಮ್ಮ ಶಾಲೆಯಲ್ಲಿ ಇಲ್ಲ ಮರೆ ಎಂದು ಒಬ್ಬರು ಅವರ ನಡೆದ ವಿಚಾರಗಳನ್ನು ಹಂಚಿಕೊಂಡು ಮಳೆಯ ಸಮಯವನ್ನು ಕಳೆಯುತ್ತಿದ್ದರು. ಹರಟೆ ಹೊಡೆದು ಕೇಳಿ ಕೇಳಿ ಸುಸ್ತಾಗಿ ಯಾವುದೋ ಒಂದು ಆಟವನ್ನು ಸೃಷ್ಟಿಸಿ ಗೊತ್ತಿಲ್ಲದವರಿಗೆ ಕಲಿಸಿ ಆಟಕ್ಕೆ ಸೇರಿಸುತ್ತಿದ್ದರು. ಅಷ್ಟೇ ಅಲ್ಲದೆ ಒಂದು ಕಡೆಯಿಂದ ಇಷ್ಟು ಜೋರು ಮಳೆ ಬಂದರೆ ರಜೆ ಸಿಗಬಹುದಾ ಎಂಬ ಸಣ್ಣ ಕುತೂಹಲ. ನಮ್ಮ ನಮ್ಮಲ್ಲಿರುವ ಭಾವನೆಗಳನ್ನು ಹೇಳಲು ಒಂದು ಸುಂದರ ಕ್ಷಣವನ್ನು ಸೃಷ್ಟಿಸುತ್ತದೆ. ಪ್ರತಿ ಮಳೆಯು ಹಲವು ಸಿಹಿಯಾದ ನೆನಪುಗಳು ಮತ್ತೆ ಚಿಗುರು ಕಟ್ಟುತ್ತದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.