



ಉಡುಪಿ: ಉಡುಪಿಯಿಂದ ಮನಾಲಿಗೆ ತೆರಳುತ್ತಿದ್ದ ಕಾಪು ಮೂಲದ ಕುಟುಂಬವಿದ್ದ ಕಾರು ಚಂಡೀಘಡದ ಬಳಿ ಅಪಘಾತಕ್ಕೆ ಸಿಲುಕಿ ತಾಯಿ, ಮಗು ಮೃತಪಟ್ಟಿದ್ದಾರೆ.
ಉಡುಪಿ ಕಾಪು ಉಳಿಯಾರಗೋಳಿ ಮೂಲದ ಸಂಜನಾ (27) ಮತ್ತು ಅವರ ಎಂಟು ತಿಂಗಳು ಪ್ರಾಯದ ಮಗು ಸ್ನಿತಿಕ್ ಮೃತಪಟ್ಟಿದ್ದು ಅವರ ಪತಿ ಕಾರ್ತಿಕ್ ಮತ್ತು ಜತೆಗಿದ್ದ ಮತ್ತೊಂದು ಕುಟುಂಬ ಅಪಾಯದಿಂದ ಪಾರಾಗಿದೆ.
ನ. 30 ರಂದು ಉಡುಪಿ ಮತ್ತು ಕಾಪುವಿನಿಂದ ಹೊರಟ ಎರಡು ಕುಟುಂಬಗಳು ದೆಹಲಿಯವರೆಗೆ ವಿಮಾನದ ಮೂಲಕ ತೆರಳಿ ಅಲ್ಲಿಂದ ಚಂಡೀಘಡ ಮಾರ್ಗವಾಗಿ ಮನಾಲಿಗೆ ಟ್ಯಾಕ್ಸಿಯಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಎರಡು ಕುಟುಂಬಗಳು ಕಾರಿನಲ್ಲಿ ತೆರಳುತ್ತಿದ್ದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿ ನಿಂತಿದ್ದ ಟ್ಯಾಂಕರ್ ಗೆ ಢಿಕ್ಕಿ ಹೊಡೆದಿತ್ತು. ಮಗುವಿನ ಮೃತದೇಹವನ್ನುಕಾಪು ಕೈಪುಂಜಾಲಿಗೆ ತಂದು ಅಂತ್ಯಕ್ರಿಯೆ ನೆರವೇರಿಸಲಾಗಿದ್ದು ಸಂಜನಾ ಅವರ ಮೃತದೇಹ ಒಂದೆರಡು ದಿನಗಳಲ್ಲಿ ಕೈಪುಂಜಾಲಿಗೆ ಆಗಮಿಸುವ ನಿರೀಕ್ಷೆಯಿದೆ.
ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಸಂಜನಾ ಮತ್ತು ಅವರ ಮಗು ತೀವ್ರ ಗಾಯಗೊಂಡಿತ್ತು. ಅಪಘಾತದ ಎರಡು ದಿನದಲ್ಲಿ ಮಗು ಮೃತಪಟ್ಟಿತ್ತು. ಸಂಜನಾ ಅವರಿಗೆ ತಲೆಗೆ ಗಂಭೀರ ಏಟಾಗಿದ್ದು ತೀವ್ರ ಗಾಯಗೊಂಡು ಕೋಮಾವಸ್ಥೆಗೆ ಹೋಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಡಿ. 10 ರಂದು ಮೃತಪಟ್ಟಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.