ಮುಂಬಯಿ: ತ್ವರಿತ ಹಾಗೂ ಹೆಚ್ಚು ಸುರಕ್ಷಿತ ಎಲ್ಲ ಬ್ಯಾಂಕ್‌ಗಳು ಆ.4ರಿಂದ ಒಂದೇ ದಿನದಲ್ಲಿ ಚೆಕ್ ಕ್ಲಿಯರ್ ಮಾಡಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೇಳಿದೆ.
ಚೆಕ್ ಬೌನ್ಸ್ ಆಗುವುದನ್ನು ತಡೆಗಟ್ಟಲು ಹಾಗೂ ವಿಳಂಬ ಅಥವಾ ನಿರಾಕರಣೆಗಳನ್ನು ತಪ್ಪಿಸಲು ಈ ಹೊಸ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ಖಾತೆದಾರರು 50,000 ರೂ.ಗಿಂತ ಹೆಚ್ಚಿನ ಚೆಕ್‌ಗಳನ್ನು ಠೇವಣಿ ಮಾಡುವ ಖಾತೆ ಸಂಖ್ಯೆ, ಚೆಕ್ ಸಂಖ್ಯೆ, ದಿನಾಂಕ, ಮೊತ್ತ ಮತ್ತು ಫಲಾನುಭವಿಯ ಹೆಸರನ್ನು ಬ್ಯಾಂಕಿಗೆ ಒದಗಿಸಬೇಕು. ಎಲ್ಲಾ ವಿವರಗಳು ಸರಿಯಿದ್ದರೆ ಬ್ಯಾಂಕ್‌ಗಳು ಒಂದೇ ದಿನದಲ್ಲೇ ಚೆಕ್‌ಗಳನ್ನು ವಿಲೇವಾರಿ ಮಾಡಲಿದೆ. ಇಲ್ಲವಾದಲ್ಲಿ ಚೆಕ್‌ಗಳನ್ನು ತೆರವುಗೊಳಿಸಲಾಗುತ್ತದೆ. ಇಲ್ಲ ತಿರಸ್ಕರಿಸಲಾಗುತ್ತದೆ. ಹೀಗಾದಾಗ ಗ್ರಾಹಕರು ಮತ್ತೆ ಚೆಕ್ ಸಲ್ಲಿಕೆ ಮಾಡಬೇಕಾಗುತ್ತದೆ. ಈ ವ್ಯವಸ್ಥೆಯನ್ನು 2 ಹಂತದಲ್ಲಿ ಜಾರಿಗೊಳಿಸಲಿದ್ದು, ಮೊದಲ ಹಂತವನ್ನು ಆ.4 ರಂದು ಹಾಗೂ ಎರಡನೇ ಹಂತವನ್ನು 2026 ಜ.3 ರಂದು ಜಾರಿಗೊಳ್ಳಲಿದೆ. ಈ ಹಿಂದೆ ಗ್ರಾಹಕರು ಕೊಟ್ಟ ಚೆಕ್‌ಗಳನ್ನು ವಿಲೇವಾರಿ ಮಾಡಲು 1 ರಿಂದ 2 ದಿನಗಳನ್ನು ತೆಗೆದುಕೊಳ್ಳುತ್ತಿತ್ತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.