ಶ್ರೇಯಸ್ ಅಂಚನ್, ಪತ್ರಿಕೋಧ್ಯಮ ವಿಭಾಗ ಎಂ ಪಿ ಎಂ ಕಾಲೇಜು ಕಾರ್ಕಳ
ಬಾಲ್ಯವೆಂಬುದು ಪ್ರತಿಯೊಬ್ಬರಿಗೂ ಮರೆಯಲಾರದ ನಂಟು.ಅದು ಎಷ್ಟೇ ವರುಷ ಕಳೆದರೂ ನಮ್ಮ ನೆನಪಿನ ಬುತ್ತಿಯಲ್ಲಿ ಭದ್ರವಾಗಿರುತ್ತದೆ.ನಾವು ಬೆಳೆದು ದೊಡ್ಡವರಾದರೂ ಒಮ್ಮೆ ಹಿಂತಿರುಗಿ ನೋಡಿದಾಗ ನಮ್ಮ ಬಾಲ್ಯದ ದಿನಗಳ ತರ್ಲೆಗಳನ್ನ , ತುಂಟಾಟಗಳನ್ನು ನೆನಪಿಸಿಕೊಂಡರೆ ಈಗಲೂ ಮುಖದಲ್ಲಿ ಸಣ್ಣ ನಗು ಮೂಡುತ್ತದೆ.
ಮಳೆಗಾಲದಲ್ಲಿ ಕಳೆದ ಬಾಲ್ಯ ತುಂಬಾ ನೆನಪಿನಲ್ಲಿರುತ್ತದೆ.ಶಾಲೆಯ ಆರಂಭ , ಹೊಸ ತರಗತಿಗಳು , ಹೊಸ ಸ್ನೇಹಿತರು ಸಿಗುವ ಸಮಯ ಇವೆಲ್ಲಾ ಮತ್ತೆ ಮರುಕಳಿಸದು. ಜೋರು ಮಳೆ ಬಂದರೆ ಕೊಡೆ ಎಲ್ಲಿ ತಾವರೆ ಆಗುತ್ತದೆಯೋ ಅನ್ನೋ ಭಯ , ರಸ್ತೆಯಲ್ಲಿ ಹೋಗುವಾಗ ಸ್ನೇಹಿತರಿಗೆ ನೀರೆರುಚುವ ಖುಷಿ ಮನೆಗೆ ಹೋಗುವಾಗ ಪೂರ್ತಿ ಒದ್ದೆಯಾಗಿ ಸೀದಾ ಬಚ್ಚಲು ಮನೆಗೆ ಓಡುವುದು, ಅಮ್ಮ ಮಾಡಿದ ಬಿಸಿ ಬಿಸಿ ತಿಂಡಿ ತಿನ್ನುವ ಅಭ್ಯಾಸ ಇವೆಲ್ಲಾ ಈಗಿನ ಮಕ್ಕಳಿಗೆ ಅನುಭವವೇ ಇಲ್ಲ.
ನಾವು ಚಿಕ್ಕವರಿರುವಾಗ ಮಳೆಯಲ್ಲಿ ನೆನೆದರೆ ಏನು ಆಗುತ್ತಿರಲಿಲ್ಲ. ಆದರೆ ಈಗಿನ ಮಕ್ಕಳಲ್ಲಿ ಚೂರು ನೆನೆದರೆ ಜ್ವರ , ಶೀತ ಇತ್ಯಾದಿ ಅನಾರೋಗ್ಯದ ಸಮಸ್ಯೆ ಕಾಣುತ್ತದೆ. ಹಾಗಾಗಿ ಈಗಿನ ಮಕ್ಕಳಿಗೆ ಇಂತಹ ಅನುಭವ ಸಿಗುವುದು ಕಷ್ಟ ಸಾಧ್ಯ .
ಸಣ್ಣಪುಟ್ಟ ಕಾಗದದ ದೋಣಿಗಳುನ್ನು ತಯಾರಿಸಿ ನೀರಿನಲ್ಲಿ ಬಿಟ್ಟು ತೇಲೀದ ಖುಷಿ, ಕೊಡೆ ಹಿಡಿಯದೆ ನೆನೆದುಕಿಂಡು ಹೋದಾಗ ಅಮ್ಮ ಬೆತ್ತದಿಂದ ಪಟ್ಟುಕೊಟ್ಟ ಖುಷಿ, ಅದೆಲ್ಲವು ನೆನಪು ಗಳ ಹೊತ್ತಗೆ. ಮಳೆಬಂದಾಗ ಮತ್ತದೆ ನೆನಪುಗಳು ಸುರಿ ಮಳೆಯನ್ನೇ ಸುರಿಸುವಂತನಿಸುತ್ತದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.