ಅರ್ಜುನ್ ಪತ್ರಿಕೋಧ್ಯಮ ವಿಭಾಗ ಎಂ ಪಿ ಎಂ ಕಾಲೇಜು ಕಾರ್ಕಳ
ಬೆಳೆಯುತ್ತಾ ಸಾಗಿದಂತೆ ನಮ್ಮೊಂದಿಗೆ ನಿರ್ಧಾರಗಳು ಟಿಸಿಲೊಡೆಯುತ್ತವೆ. ಬೆಳಗ್ಗೆ ಎದ್ದೇಳುವಾಗ ನಿನ್ನ ಕಣ್ಣ ಮುಂದೆ ಎರಡು ಆಯ್ಕೆ ಇರುತ್ತವೆ. ಒಂದು ನೀ ಕಂಡ ಕನಸನ್ನು ಕಾಣುತ್ತಲೆ ಇರುವುದು, ಇನ್ನೊಂದು ನೀನು ಕಂಡ ಕನಸನ್ನು ನನಸು ಮಾಡಲು ಮುನ್ನುಗ್ಗುವುದು. ಇಂತಹ ಸಂದರ್ಭದಲ್ಲಿ ನಿರ್ಧಾರಗಳು ನಿನ್ನನ್ನು ಹಾದು ಹೋಗುವುದು. ನಿನ್ನ ನಿರ್ಧಾರ ಎನ್ನುವುದು ಸರಿ ಮತ್ತು ಕೆಟ್ಟ ದಾರಿಯನ್ನು ತೋರಿಸುತ್ತದೆ. ನೀನು ಯಾವ ನಿರ್ಧಾರವನ್ನು ಕೈಗೊಳ್ಳುತ್ತಿದ್ದೀಯಾ ಎಂಬುದನ್ನು ಯೋಚಿಸು, ಆಗ ನೀನು ತೆಗೆದುಕೊಳ್ಳುವ ನಿರ್ಧಾರವೇ ಯಶಸ್ಸಿನ ಕಡೆಗೆ ಕೊಂಡಯುವ ಮೊದಲ ಸಾಧನ.
ಪ್ರತಿಯೊಬ್ಬ ಮನುಷ್ಯನು ಸೋಲುವುದು ಈ ನಿರ್ಧಾರದಿಂದಲೆ, ಯಾಕೆಂದರೆ, ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಪ್ರಾರಂಭವಿಲ್ಲದೆ ಅಂತ್ಯವಿಲ್ಲ. ಅದು ಶಿಕ್ಷಣವಾಗಿರಲಿ, ವೃತ್ತಿ ಆಗಿರಲಿ ಹಾಗೂ ಬದುಕಿನಲ್ಲಿ ಎದುರಾಗುವ ಯಾವುದೇ ವಿಷಯವಾಗಿರಲಿ ಪ್ರಾರಂಭವಿಲ್ಲದೆ ಬೆಳೆಯುವುದಿಲ್ಲ.
ಈ ಪ್ರಾರಂಭದ ಬೆನ್ನ ಹಿಂದೆ ನಿನ್ನ ನಿರ್ಧಾರವು ಅಡಗಿದೆ ಎಂಬುದು ಸತ್ಯ ಸಂಗತಿಯಾಗಿದೆ.ನೀನು ಯಾವಾಗ ನಿನ್ನ ಸೋಲಿನಲ್ಲಿ ತಪ್ಪು ನಿರ್ಧಾರ ತೆಗೆದಿದ್ದೇನೆ ಎಂದು ಪಶ್ಚತಾಪವನ್ನು ಪಡುತ್ತಿಯೋ ಆಗ ನಿನ್ನ ನಿರ್ಧಾರ ಬೆಲೆಯ ಅರಿವಾಗುವುದು. ಆದ್ದರಿಂದ ನೀನು ತೆಗೆದುಕೊಳ್ಳುವ ಒಂದು ನಿರ್ಧಾರ ನೂರು ಸಲ ಬೇಕಾದರೂ ಯೋಚಿಸು ಆದರೆ ನಿರ್ಧಾರ ತೆಗೆದುಕೊಂಡ ಮೇಲೆ ಏಕೆ ಈ ನಿರ್ಧಾರ ತೆಗೆದುಕೊಂಡೆ ಎಂದು ಒಂದು ಬಾರಿಯೂ ಯೋಚಿಸಬಾರದು ಅಂತಹ ನಿರ್ಧಾರ ತೆಗೆದುಕೊಳ್ಳಿ. ಹೀಗೆ ನೀನು ಯಾವ ನಿರ್ಧಾರ ತೆಗೆದುಕೊಂಡಿದ್ದೀಯೋ ಅದು ನಿನ್ನನ್ನು ಗೆಲುವಿನ ದಾರಿಯಲ್ಲಿ ಕೊಂಡೊಯ್ಯುತ್ತದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.