


ಕಾರ್ಕಳ : ಜಮೀತ್ಯುತುಲ್ ಫಲಹ ಕಾರ್ಕಳ ಘಟಕ ವತಿಯಿಂದ ಕಾರ್ಕಳ ಸಾಲ್ಮರದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ದಾನಿಗಳ ಸಹಕಾರದಿಂದ ನೋಟ್ ಪುಸ್ತಕ , ಶಾಲಾ ಬ್ಯಾಗ್, ಹಾಗೂ ಕೋಡೆಗಳನ್ನು ವಿತರಿಸಲಾಯಿತು. ಕಾರ್ಕಳ ಸಾಲ್ಮರ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಪುಸ್ತಕ ಕೊಡೆಗಳನ್ನು ಮಾತನಾಡಿದ ಉಡುಪಿ ದಕ್ಷಿಣ ಕನ್ನಡ ಜಿಲ್ಲಾ ಜಮಿಯ್ಯತುಲ್ ಫಲಾಹ್ ಅಧ್ಯಕ್ಷ ಅಷ್ಪಕ ಅಹಮದ್ ಮಾತನಾಡಿದ 140 ವರ್ಷಗಳ ಇತಿಹಾಸವಿರುವ ಉರ್ದು ಶಾಲೆಯಲ್ಲಿ ಕಲಿತ ದೇಶ ವಿದೇಶದಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದು ಹಾಗೂ ನಿರ್ವಹಿಸುತ್ತಿರುವುದು ಸಂತೋಷದ ವಿಚಾರ. ಇದೆ ಶಾಲೆಯಲ್ಲಿ ಕಲಿತ ವಿದ್ಯಾರ್ಥಿ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರ.ತಾವು ಕೂಡ ಉತ್ತಮ ವಿದ್ಯಾ ವಿದ್ಯಾಭ್ಯಾಸವನ್ನು ಪಡೆದು ಶಾಲೆಗೂ ದೇಶಕ್ಕೂ ಉತ್ತಮ ಹೆಸರನ್ನು ತರಬೇಕು ಹಾಗೂ ಸರ್ಕಾರಿ ಶಾಲೆಗಳನ್ನು ಉಳಿಸಬೇಕೆಂದು ಕರೆ ನೀಡಿದರು ನೋಟ್ ಬುಕ್ ಕೊಡುಗೆ ನೀಡಿದ ಜಮಿಯ್ಯತುಲ್ ಫಲಾಹ್ ಕಾರ್ಕಳ ಘಟಕದ ಅಧ್ಯಕ್ಷ, ಉದ್ಯಮಿ ಮೊಹಮ್ಮದ್ ಗೌಸ್, ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು ಬ್ಯಾಗ್ ಗಳನ್ನು ಕೊಡುಗೆಯಾಗಿ ನೀಡಿದ ಆಯೇಷಾ ಜ್ಯುವೆಲರ್ಸ್ ಮಾಲಕ ಮೊಹಮ್ಮದ್ ಅಸ್ಲಾಂ, ಕೊಡೆಗಳನ್ನು ನೀಡಿದ ದಾನಿ ನದೀಂ ಕುಂಟಲ್ಪಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ವೇದಿಕೆಯಲ್ಲಿ ಕರ್ನಾಟಕ ಮುಸ್ಲಿಮ್ ಜಮಾತ್ ಕಾರ್ಕಳ ತಾಲೂಕು ಅಧ್ಯಕ್ಷ ನಾಸಿರ್ ಶೇಕ್ ಬೈಲೂರು, ಸಮಾಜ ಸೇವಕ ಅಮೀರ್ ಹುಸೇನ್ ಕರಿಯಕಲ್ಲು, ಕಾಂಗ್ರೆಸ್ ಸೇವಾ ದಳದ ಅಧ್ಯಕ್ಷ ಅಬ್ದುಲ್ಲಾ ಅದಂ ಶೇಕ್, ಜಮೀಯತುಲ್ ಪಲಾಹ್ ಉಪಾಧ್ಯಕ್ಷ ಸಯ್ಯದ್ ಅಬ್ಬಾಸ್ ಅಂಚಿಕಟ್ಟೆ ಸದಸ್ಯರುಗಳಾದ ಇಜಾಜ್ ಶರೀಫ್ ಸಾಲ್ಮರ, ಮುನೀರ್ ಅಹ್ಮದ್ ತೆಲ್ಲಾರ್, ತಾಜ್ ಮಹಮ್ಮದ್, ಏನ್ ಆರ್ ಸಿ ಸಿ ಸದಸ್ಯ ಮೊಹಮ್ಮದ್ ಸಾಹೇಬ್, ಕಾರ್ಕಳ ಮುಸ್ಲಿಮ್ ಜಮಾತ್ ಸದಸ್ಯ ಮಾಸ್ಟರ್ ಇಬ್ರಾಹಿಂ, ಶಾಲಾ ಪ್ರಭಾರ ಮುಖ್ಯೊಪಾಧ್ಯಾಯರಾದ ಸಾಯಿರಾಬಾನು, ಎಸ್ ಡಿ ಎಂ ಸಿ ಅಧ್ಯಕ್ಷರಾದ ರಿಯಾಜ್, ಜಮೀತ್ಯುತುಲ್ ಫಹ್ಹ ಸದಸ್ಯರು ಮತ್ತು ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.