logo
AADYA ELECTRONICS.jpg
SHARADA TECHERS.jpeg
hindalco everlast.jpeg

ಇಂದಿನಿಂದ "ಅಮುಲ್" ಹಾಲಿನ ದರ 2 ರೂ. ಏರಿಕೆ..!

ಟ್ರೆಂಡಿಂಗ್
share whatsappshare facebookshare telegram
1 May 2025
post image

ಬೆಂಗಳೂರು: ನಂದಿನಿ ಹಾಲಿನ ದರ ಏರಿಕೆ ಬಳಿಕ ಇದೀಗ ದೇಶಾದ್ಯಂತ ಅಮುಲ್ ಹಾಲಿನ ದರ 2 ರೂ. ಏರಿಕೆಯಾಗಿದೆ.

ಇತ್ತೀಚಿಗಷ್ಟೇ ಕೆಎಂಎಫ್ ನಂದಿನಿ ಹಾಲಿನ ದರವನ್ನು ಏರಿಕೆ ಮಾಡಿತ್ತು. ಇದೀಗ ಅಮುಲ್ ಹಾಲಿನ ದರ ಹೆಚ್ಚಿಸುವ ಮೂಲ ಗ್ರಾಹಕರಿಗೆ ಮತ್ತೆ ಬರೆ ಎಳೆದಂತಾಗಿದೆ. ದೇಶಾದ್ಯಂತ ಪರಿಷ್ಕೃತ ದರ ಇಂದಿನಿಂದಲೇ (ಮೇ 1) ಜಾರಿಯಾಗಿದೆ.

ಈ ದರ ಏರಿಕೆಯು ಅಮುಲ್ ಸ್ಟ್ಯಾಂಡರ್ಡ್, ಅಮುಲ್ ಬಫೆಲೋ, ಅಮುಲ್ ಗೋಲ್ಡ್, ಅಮುಲ್ ಸ್ಲಿಮ್ ಆಂಡ್ ಟ್ರಿಮ್, ಅಮುಲ್ ಚಾಯ್‌ಮಜಾ, ಅಮುಲ್ ತಾಜಾ ಹಾಗೂ ಅಮುಲ್ ಕೌಮಿಲ್ಕ್‌ಗಳಿಗೆ ಅನ್ವಯವಾಗುತ್ತದೆ. ಕಳೆದ ವರ್ಷವಷ್ಟೇ ಗ್ರಾಹಕರಿಗೆ ರಿಲೀಫ್ ನೀಡಲು ಅಮುಲ್ ಸುಮಾರು ಐದು ತಿಂಗಳ ಕಾಲ 1 ಲೀ. ಮತ್ತು 2 ಲೀ. ಹಾಲಿನ ಪ್ಯಾಕ್‌ಗಳಲ್ಲಿ ಕ್ರಮವಾಗಿ 50 ಮಿಲಿ ಮತ್ತು 100 ಮಿಲಿ ಹೆಚ್ಚುವರಿ ಹಾಲನ್ನು ಉಚಿತವಾಗಿ ನೀಡಿತ್ತು. ಇದಲ್ಲದೆ 2025ರ ಜನವರಿಯಲ್ಲಿ 1 ಲೀ. ಪ್ಯಾಕ್‌ನ ಬೆಲೆಯನ್ನು 1 ರೂ. ಕಡಿಮೆ ಮಾಡಿತ್ತು.

ಅಮುಲ್ ಸ್ಟ್ಯಾಂಡರ್ಡ್ ಹಾಲು (500 ಮಿ.ಲೀ) ಹಳೆಯ ಬೆಲೆ: 30 ರೂ.-ಹೊಸ ಬೆಲೆ: 31 ರೂ.

ಅಮುಲ್ ಬಫೆಲೋ (ಎಮ್ಮೆ ಹಾಲು) 500 ಮಿ.ಲೀ ಹಳೆಯ ಬೆಲೆ: 36 ರೂ.-ಹೊಸ ಬೆಲೆ: 37 ರೂ.

ಅಮುಲ್ ಗೋಲ್ಡ್ ಮಿಲ್ಕ್ (500 ಮಿ.ಲೀ) ಹಳೆಯ ಬೆಲೆ: 33 ರೂ.-ಹೊಸ ಬೆಲೆ: 34 ರೂ.

ಅಮುಲ್ ಗೋಲ್ಡ್ ಹಾಲು (1 ಲೀಟರ್) ಹಳೆಯ ಬೆಲೆ: 65 ರೂ.-ಹೊಸ ಬೆಲೆ: 67 ರೂ.

ಅಮುಲ್ ಸ್ಲಿಮ್ ಆಂಡ್ ಟ್ರಿಮ್ ಮಿಲ್ಕ್ (500 ಮಿ.ಲೀ) ಹಳೆಯ ಬೆಲೆ: 24 ರೂ.-ಹೊಸ ಬೆಲೆ: 25 ರೂ.

ಅಮುಲ್ ಚಾಯ್ ಮಜಾ ಹಾಲು (500 ಮಿ.ಲೀ) ಹಳೆಯ ಬೆಲೆ: 31 ರೂ.-ಹೊಸ ಬೆಲೆ: 32 ರೂ.

ಅಮುಲ್ ತಾಜಾ ಹಾಲು (500 ಮಿ.ಲೀ) ಹಳೆಯ ಬೆಲೆ: 27 ರೂ.-ಹೊಸ ಬೆಲೆ: 28 ರೂ.

ಅಮುಲ್ ತಾಜಾ ಹಾಲು (1 ಲೀಟರ್) ಹಳೆಯ ಬೆಲೆ: 53 ರೂ.-ಹೊಸ ಬೆಲೆ: 55 ರೂ.

WhatsApp Image 2025-04-11 at 6.14.42 PM.jpeg
WhatsApp Image 2025-03-24 at 6.54.49 AM.jpeg
MCC Bank Website Ad English.jpg
WhatsApp Image 2025-01-13 at 14.53.16 (1).jpeg
WhatsApp Image 2024-10-09 at 8.05.11 PM.jpeg
WhatsApp Image 2024-04-29 at 2.40.38 PM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.