

ಹೆಬ್ರಿ: ಎಸ್.ಆರ್ ಪಬ್ಲಿಕ್ ಸ್ಕೂಲ್ (ಸಿ.ಬಿ.ಎಸ್.ಇ) ಹಾಗೂ ಎಸ್.ಆರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2026 - 27 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಎಸ್.ಆರ್ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲರಾದ ಭಗವತಿ, ಉಪಪ್ರಾಂಶುಪಾಲರಾದ ದೀಪಕ್ ಎನ್, ಎಸ್.ಆರ್. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲ್ ಆಚಾರ್ಯ, ಕೋಓರ್ಡಿನೇಟರ್ ಅಕ್ಷಿತಾ, ದೈಹಿಕ ಶಿಕ್ಷಣ ಶಿಕ್ಷಕರಾದ ಜಯಲಕ್ಷ್ಮಿ ಮತ್ತಿತರ ಶಿಕ್ಷಕರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಸತ್ತಿನ ವಿದ್ಯಾರ್ಥಿ ನಾಯಕನಾಗಿ ಸೃಜನ್ ಎಸ್.ಪಿ ವಿದ್ಯಾರ್ಥಿ ನಾಯಕಿಯಾಗಿ ಸಾನಿಕ ಎಸ್ ಶೆಟ್ಟಿ , ಸಹ ನಾಯಕನಾಗಿ ಸಾನ್ವಿ ಸತ್ಯಾನಂದ ಶೆಟ್ಟಿ ಆಹಾರ ಮಂತ್ರಿಯಾಗಿ ನವೀನ್ ರಾಜ್ ಶಿಸ್ತಿನ ಮಂತ್ರಿಯಾಗಿ ಶ್ರೇಯಸಿ ಮತ್ತು ಧ್ರುವ ಶೆಟ್ಟಿ ಸಾಂಸ್ಕೃತಿಕ ಮಂತ್ರಿಯಾಗಿ ಸುಧೀಕ್ಷಾ ಮತ್ತು ಆಯುಷ್ ಕ್ರೀಡಾ ಮಂತ್ರಿಯಾಗಿ ಅನುಕಲ್ಪ್ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಾದ ಸಮೃದ್ಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಅನ್ವಿತ್ ಕುಮಾರ್ ಸ್ವಾಗತಿಸಿ, ಧನ್ಯತಾ ವಂದಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.