logo
WhatsApp Image 2026-04-02 at 14.46.04.jpeg
hindalco everlast.jpeg

ದಂಪತಿ ಹತ್ಯೆ ಪ್ರಕರಣದಲ್ಲಿ ಭಾರತೀಯ ಮೂಲದ ಮೂವರಿಗೆ ಶಿಕ್ಷೆ: ಕೆನಡಾ ನ್ಯಾಯಾಲಯ ತೀರ್ಪು

ಟ್ರೆಂಡಿಂಗ್
share whatsappshare facebookshare telegram
11 May 2026
post image

ಕೆನಡಾದ ಅಬಾಟ್ಸ್‌ಫೋರ್ಡ್‌ನಲ್ಲಿ ದಂಪತಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಭಾರತೀಯ ಮೂಲದ ಮೂವರ ಅಪರಾಧ ಸಾಬೀತಾಗಿದೆ ಎಂದು ಕೆನಡಾದ ನ್ಯಾಯಾಲಯ ತೀರ್ಪು ನೀಡಿದೆ.

2022ರ ಮೇ ತಿಂಗಳಲ್ಲಿ ಅಬಾಟ್ಸ್‌ಫೋರ್ಡ್‌ ನ ನಿವಾಸಿಗಳಾದ ಅರ್ನಾಲ್ಡ್ ಮತ್ತು ಜೊವಾನ್ನೆ ಜಾಂಗ್ ದಂಪತಿ ತಮ್ಮ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಗುರುಕರಣ್ ಸಿಂಗ್, ಅಭಿಜೀತ್ ಸಿಂಗ್ ಮತ್ತು ಖುಷ್‌ವೀರ್ ತೂರ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಮೂವರು ದರೋಡೆ ನಡೆಸುವ ಉದ್ದೇಶದಿಂದ ಅರ್ನಾಲ್ಡ್ ಅವರ ಮನೆಗೆ ನುಗ್ಗಿದ್ದು, ದರೋಡೆ ನಡೆಸಿದ ಬಳಿಕ ದಂಪತಿಯನ್ನು ಹತ್ಯೆಗೈದಿರುವುದು ಸಾಬೀತಾಗಿದೆ ಎಂದು ಶುಕ್ರವಾರ ಬ್ರಿಟಿಷ್ ಕೊಲಂಬಿಯಾ ಪ್ರಾಂತದ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ಶೀಘ್ರ ಘೋಷಿಸುವುದಾಗಿ ನ್ಯಾಯಾಲಯ ಹೇಳಿದೆ.

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.