ಉಡುಪಿ: ಶ್ರೀ ಬ್ರಾಹೀ ದುರ್ಗಾಪರಮೇಶ್ವರೀ ದೇವಸ್ಥಾನ ಶ್ರೀ ಕ್ಷೇತ್ರ ಕಮಲಶಿಲೆಯಲ್ಲಿ ಏ.16 ರಿಂದ ಏ.21ರ ವರೆಗೆ ಶ್ರೀ ಅಮ್ಮನವರ ಮಹಾ ಸನ್ನಿಧಿಯಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ.
ಕಾರ್ಯಕ್ರಮಗಳ ವಿವರ:
ತಾ.16-04-2025 ಚೈತ್ರ ಬಹುಳ 3 ಯು ಬುಧವಾರ ಸುಮುಹೂರ್ತದಲ್ಲಿ ಅಂಕುರಾರೋಪಣ, ಧ್ವಜಾರೋಹಣ, ರಾತ್ರಿ ಭೇರಿ ತಾಡನ, ಯಾಗಶಾಲಾ ಪ್ರವೇಶ, ಕೌತುಕ ಬಂಧನ, ಶಿಬಿಕಾಯನೋತ್ಸವ.
ತಾ.17-04-2025 ಚೈತ್ರ ಬಹುಳ 4 ಯು ಗುರುವಾರ ಸಿಂಹವಾಹನೋತ್ಸವ
ತಾ.18-04-2025 ಚೈತ್ರ ಬಹುಳ 5 ಯು ಶುಕ್ರವಾರ ಮಹಾ ರಂಗಪೂಜೆ ಮತ್ತು ಪುಷ್ಪಕ ವಾಹನೋತ್ಸವ
ತಾ.19-04-2025 ಚೈತ್ರ ಬಹುಳ 6 ಯು ಶನಿವಾರ ಸುಲಗ್ನದಲ್ಲಿ "ಶ್ರೀ ಮನ್ಮಹಾರಥೋತ್ಸವ".
ತಾ.20-04-2025 ಚೈತ್ರ ಬಹುಳ 7 ಯು ಭಾನುವಾರ ಚೂರ್ಣೋತ್ಸವ
ತಾ.21-04-2025 ಚೈತ್ರ ಬಹುಳ 8 ಯು ಸೋಮವಾರ ಪ್ರಾತಃ ಅವಭೃತ, ಮೃಗಯಾ ವಿಹಾರ, ಪೂರ್ಣಾಹುತಿ, ಧ್ವಜಾವರೋಹಣ, ಕುಂಭಾಭಿಷೇಕ ನಡೆಯಲಿವೆ.
ತಮಗೆಲ್ಲರಿಗೂ ಆದರದ ಸ್ವಾಗತ ಬಯಸುವ
ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ ಆಡಳಿತ ಅನುವಂಶಿಕ ಮೊಕ್ತೇಸರರು
ಆಜ್ರಿ ಚಂದ್ರಶೇಖರ ಶೆಟ್ಟಿ ಅನುವಂಶಿಕ ಮೊಕ್ತಸರರು.
ವಿ.ಸೂ: 19-04-2025 ನೇ ಶನಿವಾರ ರಥೋತ್ಸವದ ರಾತ್ರಿ ಗಂಟೆ 10-00ಕ್ಕೆ ಶ್ರೀ ಕ್ಷೇತ್ರದ ದಶಾವತಾರ ಮೇಳದವರಿಂದ ಸೇವೆ ಆಟ ಜರುಗಲಿರುವುದು.
ತಾ.20-04-2025 ರಂದು ತುಲಾಭಾರ ಸೇವೆ ಇರುವುದರಿಂದ ಸೇವೆ ಮಾಡಲಿಚ್ಚಿಸುವವರು 19-04-2025 ರ ಸಂಜೆ ಒಳಗೆ ತಿಳಿಸತಕ್ಕದ್ದು. ವರ್ಷದ ಎಲ್ಲಾ ದಿನಗಳಲ್ಲಿ ಬಂದಂತ ಭಕ್ತಾದಿಗಳಿಗೆ ಊಟ ಹಾಗೂ ವಸತಿ ವ್ಯವಸ್ಥೆ ಇದೆ.
ಪ್ರತೀ ದಿನ ಪ್ರಸಾದ ಸೀರೆಗಳ ಮಾರಾಟ ಇರಲಿದೆ ಹಾಗೂ ರಥೋತ್ಸವ ಹಾಗೂ ಓಕಳಿ ದಿನಗಳಲ್ಲಿ ಸಿದ್ಧಾಪುರದಿಂದ ವಿಶೇಷ ಬಸ್ಸಿನ ವ್ಯವಸ್ಥೆ ಇರುತ್ತದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.