


ಕಾರ್ಕಳ:ರಾಜಪುರ ಸಾರಸ್ವತ ಬ್ರಾಹ್ಮಣ ಮಹಿಳಾ ಮಂಡಳಿ ಲಕ್ಷ್ಮೀಪುರ ಇದರ ರಜತ ಸಂಭ್ರಮ ಕಾರ್ಯಕ್ರಮವು ಮೇ 24 ಮತ್ತು 25 ರಂದು ಹಿರ್ಗಾನ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷೆ ಉಷಾ ನಾಯಕ್ ತಿಳಿಸಿದರು.
ಅವರು ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಶ್ರೀಮತಿ ಇಂದುಮತಿ ಜಿ ಪ್ರಭು ಸ್ಥಾಪಕ ಅಧ್ಯಕ್ಷರಾಗಿ, ಶ್ರೀಮತಿ ಉಷಾ ನಾಯಕ್ ಕಾರ್ಯದರ್ಶಿಯಾಗಿ, ಶ್ರೀಮತಿ ಶುಭಾ ಬಿ ವಾಗ್ಗೆ ಕೋಶಾಧಿಕಾರಿಯಾಗಿ, ಒಟ್ಟು ಸಮಾಜದ 23 ಮಹಿಳೆಯರ ಕಾರ್ಯಕಾರಿ ಸಮಿತಿಯೊಂದಿಗೆ ಆರಂಭವಾದ ಈ ಸಂಸ್ಥೆಯಲ್ಲಿ ಪ್ರಸ್ತುತ 225 ಸದಸ್ಯರಿದ್ದಾರೆ. ಸಂಸ್ಥೆಯು ನಿರಂತರವಾಗಿ ವಿದ್ಯಾರ್ಥಿವೇತನ, ಪ್ರತಿಭಾಪುರಸ್ಕಾರ, ವೈದ್ಯಕೀಯ ಸಹಾಯ, ಆರೋಗ್ಯ ಶಿಬಿರ, ಕ್ರೀಡೆ, ಭಜನೆ, ಯಕ್ಷಗಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ವ್ರತ, ಕುಂಕುಮಾರ್ಚನೆ, ಲಲಿತ ಸಹಸ್ರನಾಮ ಹಾಗೂ ಶ್ರೀ ಶನೈಶ್ಚರ ವ್ರತ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ವರ್ಷಂಪ್ರತಿ ಹಮ್ಮಿಕೊಳ್ಳಲಾಗುತ್ತಿದೆ. 2003 ರಲ್ಲಿ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೈವಲ್ಯ ಮಠದ ಉಭಯ ಸ್ವಾಮೀಜಿಗಳ ಚಾತುರ್ಮಾಸದ ಸುಸಂದರ್ಭದಲ್ಲಿ ಅಖಿಲ ಭಾರತ ಮಟ್ಟದ ಪ್ರಥಮ ಆರ್ ಎಸ್ ಬಿ ಮಹಿಳಾ ಸಮ್ಮೇಳನವನ್ನು ಆಯೋಜಿಸಿದ್ದು ಪ್ರಮುಖ ಸಾಧನೆಯಾಗಿದೆ. ಎಂದರು
ದೇವಳದ ಮಾಜಿ ಆಡಳಿತ ಮೊಕೇಸರರಾಗಿದ್ದ ಶ್ರೀಯುತ ಬಾಬಣ್ಣ ವಾಗ್ಲೆಯವರು ಕಾರ್ಕಳ ಜೋಡುರಸ್ತೆಯಲ್ಲಿ ಮಹಿಳಾ ಮಂಡಳಿಗೆ ದಾನವಾಗಿ ನೀಡಿದ ಐದು ಸೆಂಟ್ಸ್ ಸ್ಥಳದಲ್ಲಿ ಊರ ಪರವೂರ ದಾನಿಗಳ ನೆರMapನಿಂದ ಶ್ರೀ ದುರ್ಗಾ ಲಕ್ಷ್ಮಿ ಎಂಬ ಭವ್ಯ ಕಟ್ಟಡವನ್ನು ನಿರ್ಮಿಸಲಾಯಿತು. ಇದು 2009ರಲ್ಲಿ ಪರಮ ಪೂಜ್ಯ ಕೈವಲ್ಯ ಮಠಾಧೀಶರಾದ ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜರವರ ದಿವ್ಯ ಹಸ್ತದಿಂದ ಉದ್ಘಾಟನೆಗೊಂಡಿದೆ. 2001ರಲ್ಲಿ ವಿದ್ವಾನ್ ಶ್ರೀ ಯೋಗೀಶ್ ಕಿಣಿಯವರ ಮಾರ್ಗದರ್ಶನದಲ್ಲಿ ಪ್ರಾರಂಭವಾದ ಶ್ರೀ ಮಹಾಲಕ್ಷ್ಮಿ ಮಹಿಳಾ ಭಜನಾ ಮಂಡಳಿ ಲಕ್ಷ್ಮಿಪುರ ಕಾರ್ಕಳ ಇದು ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಭಜನಾ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಾ ಬಂದಿದ್ದು, ಇದೀಗ 25 ವರ್ಷಗಳನ್ನು ಪೂರೈಸುತ್ತಿದೆ. 2008ರಲ್ಲಿ ದೇವಸ್ಥಾನದಲ್ಲಿ ಜರಗಿದ ರುಕ್ ಸಂಹಿತ ಯಾಗದ ಸುಸಂದರ್ಭದಲ್ಲಿ ಕೈವಲ್ಯ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿಯವರಿಂದ ಉದ್ಘಾಟನೆಗೊಂಡ ಶ್ರೀ ಮಹಾಲಕ್ಷ್ಮಿ ಮಹಿಳಾ ಯಕ್ಷಗಾನ ಮಂಡಳಿ ಲಕ್ಷ್ಮಿಪುರ ಬಡಗುತಿಟ್ಟು ತಂಡವು ಸಮಾಜದ ಪ್ರಪ್ರಥಮ ಮಹಿಳಾ ಯಕ್ಷಗಾನ ಮಂಡಳಿಯಾಗಿದೆ. ಈ ತಂಡವು ಕಾರ್ಕಳ, ಉಡುಪಿ, ಮಂಗಳೂರು, ಬೆಂಗಳೂರು, ಕೇರಳ, ಮುಂಬೈ ಮುಂತಾದೆಡೆ ಬಡಗುತಿಟ್ಟಿನ ಯಕ್ಷಗಾನ ಹಾಗೂ ತಾಳಮದ್ದಳೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದು, ಯಶಸ್ವಿ 17 ವರ್ಷಗಳನ್ನು ಪೂರೈಸಿದೆ. ರಜತ ಸಂಭ್ರಮದ ಈ ಕಾರ್ಯಕ್ರಮಕ್ಕೆ ಕಾಸರಗೋಡಿನ ಶೇಣಿ ಶಾರದಾಂಬ ವಿದ್ಯಾಸಂಸ್ಥೆಗಳ ಸಂಚಾಲಕರಾದ ಶ್ರೀಮತಿ ಶಾರದಾ ವೈ ಶೇಣಿ ಹಾಗೂ ಐಸಿಎಐ ಮಂಗಳೂರು ಘಟಕದ ಉಪಾಧ್ಯಕ್ಷರಾದ ಸಿಎ ಮಮತಾ ರಾವ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವೇದಿಕೆಯಲ್ಲಿ ಲಕ್ಷ್ಮೀಪುರ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಆಡಳಿತ ಮೊಕೇಸರರಾದ ಶ್ರೀ ಚೇತನ್ ನಾಯಕ್ ಮತ್ತು ಕಾರ್ಕಳ ತಾಲ್ಲೂಕು ರಾಜಾಪುರ ಸಾರಸ್ವತ ಸಂಘದ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ನಾಯಕ್ ಉಪಸ್ಥಿತರಿರಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಪ್ರಮುಖ ಸಂಸ್ಥೆಗಳ ಪದಾಧಿಕಾರಿಗಳಾದ ಮಣಿಪಾಲದ ಶ್ರೀಮತಿ ಮೋಹಿನಿ ನಾಯಕ್, ಮುಂಬೈನ ಶ್ರೀಮತಿ ಜ್ಯೋತಿ ಪಾಟ್ಕರ್, ಮುಂಬೈನ ಶ್ರೀಮತಿ ವರ್ಷ ನಾಯಕ್, ಮುಂಬೈನ ಶ್ರೀಮತಿ ಸುಮಿತ್ರ ನಾಯಕ್, ಮಣಿಪಾಲದ ಶ್ರೀಮತಿ ಸುಧಾ ನಾಯಕ್, ಬೆಂಗಳೂರಿನ ಶ್ರೀಮತಿ ಸುಮಾ ಪ್ರಭು, ಬೆಂಗಳೂರಿನ ಶ್ರೀಮತಿ ರೂಪ ನಾಯಕ್, ಮಣಿಪಾಲದ ಶ್ರೀಮತಿ ವನಿತಾ ನಾಯಕ್, ಬಂಟಕಲ್ಲಿನ ಶ್ರೀಮತಿ ಇಂದಿರಾ ಕಾಮತ್, ಬೆಳಗಾಂನ ಶ್ರೀಮತಿ ಸುಮ ನಾಯಕ್, ತೀರ್ಥಹಳ್ಳಿಯ ಶ್ರೀಮತಿ ಗಿರಿಜಾ ಕಾಮತ್, ಮೊಗೇರಿನ ಶ್ರೀಮತಿ ಮೋಹಿನಿ ನಾಯಕ್ ಮತ್ತು ಮೋಂತಿಮಾರಿನ ಶ್ರೀಮತಿ ಗೀತಾ ವಾಗ್ಗೆ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮಹಿಳಾ ಮಂಡಳಿಯ ಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಇಂದುಮತಿ ಪ್ರಭು ಮತ್ತು ಸ್ಥಾಪಕ ಕೋಶಾಧ್ಯಕ್ಷರಾದ ಶ್ರೀಮತಿ ಶುಭಾ ವಾಗ್ಲೆ ಅವರನ್ನು ಗೌರವಿಸಲಾಗುವುದು. ಅತಿಥಿಗಳಾಗಿ ಕಾರ್ಕಳ ರಾಜರಾಜೇಶ್ವರಿ ಸಿಲ್ಕ್ಸ್‌ನ ಶ್ರೀಮತಿ ಮಾನಸ ವಾಗ್ಲೆ, ಯಕ್ಷಗಾನ ದ ಶ್ರೀಮತಿ ಕಾವ್ಯಶ್ರೀ ನಾಯಕ್ ಆಜೇರು, ಖ್ಯಾತ ಯಕ್ಷಗಾನ ಭಾಗವತರಾದ ಶ್ರೀಮತಿ ರಾಜೀವಿ ನಾಯಕ್ ಪೆರ್ಣಂಕಿಲ ಹಾಗೂ ರಿಕ್ಷಾ ಚಾಲಕಿ ಮತ್ತು ಸಮಾಜ ಸೇವಕಿಯಾದ ಮಹಿಳಾ ಸಾಧಕರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ.
ಮಧ್ಯಾಹ್ನ 12.15 ರಿಂದ 1.15ರವರೆಗೆ ನಡೆಯುವ ವಿಶೇಷ ಗೋಷ್ಠಿಯಲ್ಲಿ ಬ್ರಹ್ಮಾವರ ಎಸ್‌ಎಂಎಸ್ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ ವಿದ್ಯಾಲತಾ ಮತ್ತು ಬೆಂಗಳೂರಿನ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರಾದ ಡಾ ಶ್ರುತಿ ನಾಯಕ್ ಅವರು ಭಾಗವಹಿಸಲಿದ್ದಾರೆ. ಬಂಟಕಲ್ಲಿನ ಶ್ರೀ ದುರ್ಗಾ ಚಂಡೆ ಬಳಗದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಮೆ.25 ರಂದು ವಿವಿಧ ಮಹಿಳಾ ಮಂಡಳಿಗಳ ಭಜನಾಕಾರ್ಯಕ್ರಮ ಜರುಗಲಿದೆ
ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ರೇವತಿ ತೆಂಡುಲ್ಕರ್, ಖಜಾಂಚಿ ಶೋಭ ಪ್ರಭು ಹಾಗೂ ಸದಸ್ಯರಾದ ಭಾರತಿ ಮತ್ತು ಸುಮಾ ನಾಯಕ್ ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.