ನಿತಿನ್ ಪತ್ರಿಕೋಧ್ಯಮ ವಿಭಾಗ ಎಂ ಪಿ ಎಂ ಕಾಲೇಜು ಕಾರ್ಕಳ
ನಮ್ಮ ಗ್ರಾಮವು ಅತ್ಯಂತ ಸುಂದರವಾದ ಗ್ರಾಮ. ಗ್ರಾಮ ಎಂದು ಕರೆದರೂ ಯಾವ ನಗರಕ್ಕೂ ಕಮ್ಮಿ ಇಲ್ಲಾ. ಪ್ರತಿಯೊಂದು ವಸ್ತು ಕಣ್ಣಿಗೆ ಕಾಣುವ ದೂರದಲ್ಲಿಯೇ ಸಿಗುತ್ತದೆ. ನಮ್ಮ ಗ್ರಾಮದಲ್ಲಿ ಬ್ರಹ್ಮರ ಪಾದೆ ಎಂಬ ಚಿಕ್ಕ ಪ್ರವಾಸಿ ತಾಣ ಇದೆ.. ಇದರ ಬಗ್ಗೆ ಅಷ್ಟೊಂದು ವಿಷಯ ಹರಿದಾಡದಿದ್ದರೂ ನಮಗೆ ಅದು ಪ್ರವಾಸಿ ತಾಣವೇ ಆಗಿದೆ. ನಮ್ಮ ಗ್ರಾಮ ದೇವತೆ ಶ್ರೀ ದುರ್ಗಾ ಪರಮೇಶ್ವರಿ. ನಮ್ಮ ದೇವರ ಜಾತ್ರೆಯ ಸಂದರ್ಭದಲ್ಲಿ ನನ್ನ ಎಲ್ಲಾ ಬಾಲ್ಯ ಸ್ನೇಹಿತರು ಒಟ್ಟಾಗಿ ಮೆರವಣಿಗೆ ನೋಡುವುದೇ ಚಂದಾ.
ನಾವು ನಗರಗಳಲ್ಲಿ ಕಾಣದ ಖುಷಿ ಗ್ರಾಮದಲ್ಲಿ ಕಾಣಬಹುದು. ನಗರಗಳಲ್ಲಿ ಅದೇ ಗಾಡಿಯ ಶಬ್ಧ, ಹೊಗೆ, ಕಿರಿ ಕಿರಿ ಕೇಳಲು ಹಿತವಾಗುವುದಿಲ್ಲ. ಎಲ್ಲಿ ನೋಡಿದರು ಅದೇ ಜನರ ರಾಶಿ ಅವರದ್ದೇ ಆದಂತಹ ಲೋಕ. ಎತ್ತ ನೋಡಿದರು ಆ ಜನಮಂದೆ ಕಾಣುತ್ತಲೇ ಇರುವುದು ದೊಡ್ಡ ದೊಡ್ಡ ಗಾಡಿಗಳು ಅಬ್ಬಬ್ಬಾ ಹೇಳುವಾಗನೇ ಸುಸ್ತು ಹಾಗುತ್ತದೆ. ಆದರೆ ಗ್ರಾಮದಲ್ಲಿ ಇರುವ ಶಾಂತಿ ಎಲ್ಲಿಯೂ ಸಿಗುವುದಿಲ್ಲ. ವರ್ಷಕ್ಕೊಮ್ಮೆ ಹಾಗುವ ಕೋಲ,
ಊರಿನಲ್ಲಿ ಹಾಗುವ ನಾಗಬನ,ಗ್ರಾಮ ದೇವತೆಯ ಪೂಜೆ. ಊರಿನ ನಡುವೆ ಹಾಗುವ ನಾಟಕ, ಯಕ್ಷಗಾನ, ನೋಡಲು ಬರುವ ಜನರ ಮಧ್ಯೆ ಸಮಯ ಕಳೆಯಲು ಬಂದು ಸೇರುವ ಕೆಲವು ಗುಂಪು ಆಹಾ ಎಷ್ಟು ಚೆಂದಾ ಆಲ್ವಾ.
ಅದೇನೋ ಗೊತ್ತಿಲ್ಲ ಎಷ್ಟೋ ಊರಿಗೆ ತಿರುಗಿ ನೋಡಲು ಹೋಗುತ್ತೇವೆ. ನೋಡಿ ಆನಂದಿಸುತ್ತೇವೆ. ಎಲ್ಲಾ ನೋಡಿ ಕಣ್ತುಂಬಿಸಿಕೊಂಡ ಮೇಲೇ ನಮ್ ಊರಿಗೆ ಯಾವಾಗ ಮರಳಿ ಹೋಗತ್ತೇವೆ ಎಂಬುದೇ ಚಿಂತೆ. ಪ್ರತಿಯೊಂದಕ್ಕೂ ನಾವು ಹೊಂದಿಕೊಂಡು ಹೋಗಿರ್ತೀವಿ. ಹಾಗಾಗಿ ಏನು ಸಮಸ್ಯೆ ಬಂದ್ರು ಏನೇ ಆದರೂ ನಮ್ ಊರೇ ನಮ್ಗೆ ಮೇಲು.
ಅದೊಂದು ಖುಷಿಯ ಅಗರವು ಹೌದು. ರೋಮಾಂಚನ ವು ಹೌದು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.