logo
WhatsApp Image 2026-04-02 at 14.46.04.jpeg
hindalco everlast.jpeg

ಗ್ರ್ಯಾವಿಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರಿಗೆ ಭಾಷೆ ಮತ್ತು ಬರವಣಿಗೆ ಕೌಶಲ್ಯ ಕಾರ್ಯಾಗಾರ

ಟ್ರೆಂಡಿಂಗ್
share whatsappshare facebookshare telegram
29 May 2026
post image

ಬ್ರಹ್ಮಾವರ: ತಾಲೂಕಿನ ನಡೂರಿನ ರತ್ನಶೀಲ ಎಜುಕೇಶನ್ ಟ್ರಸ್ಟ್ (ರಿ) ವತಿಯಿಂದ ನಡೆಸಲ್ಪಡುತ್ತಿರುವ ಗ್ರ್ಯಾವಿಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಭಾಷಾ ಸಾಮರ್ಥ್ಯ ಹಾಗೂ ಬರವಣಿಗೆ ಕೌಶಲ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬೆಳೆಸುವ ಉದ್ದೇಶದಿಂದ ಶಿಕ್ಷಕರಿಗಾಗಿ ವಿಶೇಷ ಕಾರ್ಯಾಗಾರವನ್ನು ಮೇ 28ರಂದು ಆಯೋಜಿಸಲಾಯಿತು. ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳ ಭಾಷಾ ಬೆಳವಣಿಗೆ, ಸೃಜನಾತ್ಮಕ ಬರವಣಿಗೆ, ವ್ಯಾಕರಣ ಕೌಶಲ್ಯ, ಓದು ಹಾಗೂ ಬರಹದ ಸಾಮರ್ಥ್ಯ ವೃದ್ಧಿಗೆ ಅಗತ್ಯವಾದ ಬೋಧನಾ ವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡಲಾಯಿತು. ಶಿಕ್ಷಕರು ತರಗತಿ ಕೊಠಡಿಯಲ್ಲಿ ಅನುಸರಿಸಬಹುದಾದ ವಿವಿಧ ನವೀನ ಕಲಿಕಾ ಚಟುವಟಿಕೆಗಳು ಹಾಗೂ ವಿದ್ಯಾರ್ಥಿಗಳಲ್ಲಿ ಭಾಷೆಯ ಮೇಲಿನ ಆಸಕ್ತಿಯನ್ನು ಹೆಚ್ಚಿಸುವ ತಂತ್ರಗಳನ್ನು ಪರಿಚಯಿಸಲಾಯಿತು. ಶಾರದಾ ಶಿಕ್ಷಕಿಯರ ತರಬೇತಿ ವಿದ್ಯಾಲಯ, ಕುಂಜಿಬೆಟ್ಟು ಇದರ ಪ್ರಾಂಶುಪಾಲರಾದ ಶ್ರೀಮತಿ ಸುನಿತಾ ಹಾಗೂ ಉಪನ್ಯಾಸಕಿ ದಿವ್ಯ ಕೋಟ್ಯಾನ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಅವರು ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಅಳೆಯುವ ವಿಧಾನಗಳು, ಪರಿಣಾಮಕಾರಿ ಬರವಣಿಗೆ ಅಭ್ಯಾಸಗಳ ರೂಪಿಸುವಿಕೆ ಹಾಗೂ ಶಿಕ್ಷಕರ ಪಾತ್ರದ ಕುರಿತು ವಿವರವಾದ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ವಿಭಾಗೀಯ ಮುಖ್ಯಸ್ಥೆಯರಾದ ಶ್ರೀಮತಿ ಸಂಗೀತ ಅಡಿಗ ಹಾಗೂ ಶ್ರೀಮತಿ ಸರಸ್ವತಿ ಉಪಸ್ಥಿತರಿದ್ದು, ಕಾರ್ಯಾಗಾರದ ವಿವಿಧ ಅಧಿವೇಶನಗಳಲ್ಲಿ ಶಿಕ್ಷಕರೊಂದಿಗೆ ಸಕ್ರಿಯವಾಗಿ ಭಾಗವಹಿಸಿದರು. ಶಿಕ್ಷಕರು ತಮ್ಮ ಅನುಭವಗಳನ್ನು ಹಂಚಿಕೊಂಡು ವಿವಿಧ ಶೈಕ್ಷಣಿಕ ವಿಷಯಗಳ ಕುರಿತು ಚರ್ಚೆ ನಡೆಸಿದರು..

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.