


ಕಾರ್ಕಳ, ಆ.5: ಕರಾವಳಿ ರಂಗಾಯಣ, ಕಾರ್ಕಳದ 2026–27ನೇ ಸಾಲಿನ ರೆಪರ್ಟರಿ ಚಟುವಟಿಕೆಗಳಿಗೆ ಆಗಸ್ಟ್ 3ರಂದು ಅಧಿಕೃತವಾಗಿ ಚಾಲನೆ ದೊರೆಯಿತು.
ಈ ಸಂದರ್ಭದಲ್ಲಿ ಖ್ಯಾತ ಸಾಹಿತಿ ಡಾ. ಕೆ. ಶಿವರಾಮ ಕಾರಂತರವರ 'ಚೋಮನ ದುಡಿ' ಕಾದಂಬರಿಯನ್ನು ತಂಡದ ಎಲ್ಲಾ ಕಲಾವಿದರಿಗೆ ವಿತರಿಸುವ ಮೂಲಕ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಪುಸ್ತಕ ವಿತರಣೆಯ ಮೂಲಕ ಸಾಹಿತ್ಯ ಮತ್ತು ರಂಗಭೂಮಿಯ ನಂಟನ್ನು ಮತ್ತಷ್ಟು ಗಟ್ಟಿಗೊಳಿಸುವ ಆಶಯವನ್ನು ಈ ಕಾರ್ಯಕ್ರಮದಲ್ಲಿ ಪ್ರತಿಬಿಂಬಿಸಲಾಯಿತು.
ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ್ ಕೋಟ್ಯಾನ್ ಅವರು ಕಲಾವಿದರಿಗೆ ಪುಸ್ತಕ ವಿತರಿಸಿ, ಕರಾವಳಿ ರಂಗಾಯಣದ ಉದ್ದೇಶಗಳು, ರಂಗಭೂಮಿಯ ಮಹತ್ವ ಹಾಗೂ ಕಲಾವಿದರ ಜವಾಬ್ದಾರಿಗಳ ಕುರಿತು ಮಾರ್ಗದರ್ಶನ ನೀಡಿದರು. ತಮ್ಮ ಹಿತನುಡಿಗಳ ಮೂಲಕ ಕಲಾವಿದರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕರಾವಳಿ ರಂಗಾಯಣದ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ, ನಾದ ಮಣಿನಾಲ್ಕೂರು ಹಾಗೂ ಕರಾವಳಿ ರಂಗಾಯಣ ಮತ್ತು ಕೋಟಿ-ಚೆನ್ನಯ ಥೀಮ್ ಪಾರ್ಕಿನ ಸಿಬ್ಬಂದಿ ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.