ಉಡುಪಿ: ಅಂಚೆ ಇಲಾಖೆಯ ವತಿಯಿಂದ ಯು.ಪಿ.ಯು ಇಂಟರ್‌ನ್ಯಾಷನಲ್ ಲೆಟರ್ ರೈಟಿಂಗ್ ಕಾಂಫಿಟೇಶನ್ ಪ್ರಯುಕ್ತ 9 ರಿಂದ 15 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಇಮ್ಯಾಜಿನ್ ಯು ಆರ್ ದ ಓಷನ್. ರೈಟ್ ಎ ಲೆಟರ್ ಟು ಸಮ್‌ಒನ್ ಎಕ್ಸ್ಪ್ಲೇನಿಂಗ್ ವೈ ಅಂಡ್ ಹೌ ದೇ ಶುಡ್ ಟೇಕ್ ಗುಡ್ ಕೇರ್ ಆಫ್ ಯು ವಿಷಯದ ಕುರಿತು ಪತ್ರಲೇಖನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧಾಳುಗಳು ಪತ್ರಲೇಖನವನ್ನು ಹಿಂದಿ, ಇಂಗ್ಲೀಷ್ ಅಥವಾ ಪ್ರಾದೇಶಿಕ ಭಾಷೆಯಲ್ಲಿ ೮೦೦ ಶಬ್ದಗಳು ಮೀರದಂತೆ ಕೈಬರಹದಲ್ಲಿ ನಿಗಧಿಪಡಿಸಿದ ಕೇಂದ್ರದಲ್ಲಿ ಬರೆಯಬಹುದಾಗಿದೆ.
ಆಸಕ್ತ ವಿದ್ಯಾರ್ಥಿಗಳು ತಮ್ಮ ಅರ್ಜಿಯನ್ನು ತಮ್ಮ ಶಾಲೆಯ ಮುಖಾಂತರ ಫೆಬ್ರವರಿ 2೦ ರ ಒಳಗಾಗಿ ಅಂಚೆ ಅಧೀಕ್ಷಕರು, ಉಡುಪಿ ಅಂಚೆ ವಿಭಾಗ, ಉಡುಪಿ-576101 ಇಲ್ಲಿಗೆ ಸಲ್ಲಿಸಬಹುದಾಗಿದೆ. ಅತ್ಯುತ್ತಮ ಮೂರು ಪತ್ರ ಲೇಖನಗಳಿಗೆ ಬಹುಮಾನಗಳನ್ನು ದೇಶೀಯ ಮಟ್ಟದಲ್ಲಿ ಕ್ರಮವಾಗಿ 5೦,೦೦೦ ರೂ., 25,೦೦೦ ರೂ., 10,೦೦೦ ಮತ್ತು ಕರ್ನಾಟಕ ವೃತ್ತ ಮಟ್ಟದಲ್ಲಿ 25,೦೦೦, 1೦,೦೦೦ ಮತ್ತು 5,೦೦೦ ರೂ.ಗಳನ್ನು ನೀಡಲಾಗುವುದು ಎಂದು ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.