logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಮದುವೆ ಎಂದರೆ ಎರಡು ಮನಸ್ಸು ಗಳ ಮತ್ತು ಸಮಾಜದ ಒಗ್ಗಟ್ಟಿನ ಪ್ರತೀಕ : ಉದ್ಯಮಿ ಶಿವಶಂಕರ್ ನಾಯಕ್

ಟ್ರೆಂಡಿಂಗ್
share whatsappshare facebookshare telegram
9 Sept 2025
post image

ಕಾರ್ಕಳ: “ಮದುವೆ ಎಂದರೆ ಕೇವಲ ಇಬ್ಬರ ಜೀವನವನ್ನು ಕಟ್ಟಿ ಹಾಕುವ ಬಾಂಧವ್ಯವಲ್ಲ, ಅದು ಎರಡು ಕುಟುಂಬಗಳ, ಎರಡು ಮನಸ್ಸುಗಳ ಮತ್ತು ಸಮಾಜದ ಒಗ್ಗಟ್ಟಿನ ಪ್ರತೀಕವಾಗಿದೆ” ಎಂದು ಉದ್ಯಮಿ ಶಿವಶಂಕರ್ ನಾಯಕ್ ಅಭಿಪ್ರಾಯಪಟ್ಟರು. ಅವರು ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ, ಹಿರಿಯಡ್ಕ ಹಾಗೂ ಅರ್ ಎಸ್ ಬಿ, ಹಾಗು ಬಿ ಜಿಎಸ್ ಬಿ ಸಪ್ತಪದಿ ವಿವಾಹ ಮಾಹಿತಿ ಕೇಂದ್ರ, ಬೆಂಗಳೂರು ಇವರ ಸಹಯೋಗದೊಂದಿಗೆ ಓಂತಿಬೆಟ್ಟು ಶಿವಪುರ ಸುಬ್ಬಣ್ಣ ನಾಯಕ್ ಸಾರಸ್ವತ ಸಭಾಭವನದಲ್ಲಿ ನಡೆದ “ಸಪ್ತಪದಿ ವಧು–ವರ ಅನ್ವೇಷಣೆ – 2025” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅವರು ಮುಂದುವರಿಸಿ, “ಸ್ವಸಮಾಜದೊಳಗೆ ವಧುವರರ ವಿವಾಹ ನಡೆದರೆ ಅದರ ಮೂಲಕ ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಆಚರಣೆಗಳು ಪೀಳಿಗೆಯಿಂದ ಪೀಳಿಗೆ ಸಾಗುತ್ತವೆ. ಭಾಷೆ, ಧರ್ಮ, ಆಚರಣೆ, ಸಂಪ್ರದಾಯಗಳು ಉಳಿದುಕೊಳ್ಳುತ್ತವೆ. ಇದೇ ರೀತಿ ಸಮುದಾಯದೊಳಗೆ ಮದುವೆ ಮಾಡಿದರೆ ಪರಸ್ಪರ ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತದೆ, ಬದುಕಿನ ಸವಾಲುಗಳನ್ನು ಎದುರಿಸಲು ಕುಟುಂಬಗಳ ಸಹಕಾರ ಹೆಚ್ಚುತ್ತದೆ. ಇದರ ಮೂಲಕ ಸಮಾಜದಲ್ಲಿ ಏಕತೆ ಬಲವಾಗುತ್ತದೆ. ಸಮಾಜದಲ್ಲಿ ಆರ್ಥಿಕ ಶಕ್ತಿಯೂ, ಮಾನಸಿಕ ಬಲವೂ ವೃದ್ಧಿಸುತ್ತದೆ. ಹೀಗಾಗಿ ಸ್ವಸಮಾಜದೊಳಗಿನ ವಿವಾಹ ಕೇವಲ ಕುಟುಂಬದ ಹಿತಕ್ಕಾಗಿ ಮಾತ್ರವಲ್ಲ, ಸಮಾಜದ ಒಗ್ಗಟ್ಟು, ಅಭಿವೃದ್ಧಿ ಹಾಗೂ ಭವಿಷ್ಯದ ಭದ್ರತೆಗಾಗಿ ಅತ್ಯಗತ್ಯ” ಎಂದು ಹೇಳಿದರು.

ಕ ಬೆಂಗಳೂರು ಅರ್ ಎಸ್ ಬಿ ಸಂಘದ ಮಾಜಿ ಅಧ್ಯಕ್ಷ ನಾಗೇಂದ್ರ ಕಾಮತ್ ರಂಜದಕಟ್ಟೆ ಮಾತನಾಡಿ, “ಅಜ್ಞಾನ, ಬಡತನ, ಅಸಮಾನತೆ, ಅಂಧಶ್ರದ್ಧೆ ಇವು ಸಮಾಜವನ್ನು ಹಿಂದುಳಿಯುವಂತೆ ಮಾಡುತ್ತವೆ. ಅವನ್ನು ಹೋಗಲಾಡಿಸಲು ಪ್ರತಿಯೊಬ್ಬರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಸೇವಾಭಾವದಿಂದ ಶ್ರಮಿಸಿದರೆ, ಸಮಾಜದ ಅಭಿವೃದ್ಧಿ ಖಂಡಿತವಾಗಿಯೂ ಸಾಧ್ಯ. ನಾವು ಎಲ್ಲರೂ ಕೈ ಜೋಡಿಸಿ, ಒಟ್ಟಾಗಿ ಹೆಜ್ಜೆ ಹಾಕಿದರೆ ಮಾತ್ರ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ” ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಕೀರ್ತಿ ಕೋಲ್ಗಾರ್ ಮಾತನಾಡಿ. “ನಾವು ಸಮಾಜದ ಭಾಗವಾಗಿರುವುದರಿಂದ ಪರಸ್ಪರ ಸಹಕಾರ, ಸಹಾನುಭೂತಿ ಹಾಗೂ ಪರೋಪಕಾರದ ಮನೋಭಾವ ಬೆಳೆಸಿಕೊಳ್ಳುವುದು ಅತ್ಯಗತ್ಯ” ಎಂದು ಹೇಳಿದರು.

ಹಿರಿಯಡ್ಕ RSB ಸಂಘದ ಅಧ್ಯಕ್ಷ ನವೀನ್ ಪ್ರಭು ಸಭಾಧ್ಯಕ್ಷತೆ ವಹಿಸಿ ಹಿರಿಯಡ್ಕ RSB ಸಂಘದ ಕಾರ್ಯದರ್ಶಿ ಪ್ರಕಾಶ್ ಪ್ರಭು ತಮ್ಮ ಅಭಿಪ್ರಾಯ ಹಂಚಿಕೊಂಡರು

ಈ ಸಂದರ್ಭದಲ್ಲಿ ಪಾಕಪ್ರವೀಣ ಕೇಶವ ನಾಯಕ್ ಪರ್ಕಳ, ಪತ್ರಕರ್ತ ಕೀರ್ತಿ ಕೋಲ್ಗಾರ್ ಹಾಗೂ ಪೆರ್ಣಂಕಿಲ ರಾಜೀವಿ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಸುನಿಲ್ ಬೋರ್ಕಾರ್ ಪುತ್ತೂರು ಹಾಗೂ ಮೋಹನ್ದಾಸ್ ಪ್ರಭು ನಿರೂಪಿಸಿದರು. ಮೇಘ ನಾಗರಾಜ ನಾಯಕ್ ದನ್ಯವಾದ ವಿತ್ತರು

ಮುಂಬೈ, ಪುಣೆ, ಬೆಂಗಳೂರು, ಕಾಸರಗೋಡು, ಪುತ್ತೂರು, ಸುಳ್ಯ, ಉಡುಪಿ, ಕಾರ್ಕಳ, ಮಣಿಪಾಲ, ತೀರ್ಥಹಳ್ಳಿ ಹಾಗೂ ಶಿವಮೊಗ್ಗ ಜಿಲ್ಲೆಗಳಿಂದ ಬಂದ ಒಟ್ಟು 160ಕ್ಕೂ ಹೆಚ್ಚು ವಧುವರರು ಈ ಸಪ್ತಪದಿ ವಧು–ವರ ಅನ್ವೇಷಣೆಗೆ ನೋಂದಾಯಿಸಿಕೊಂಡಿದ್ದರು

WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.