ಉಡುಪಿ, ಆ.6: ಉಡುಪಿಯ ಕಿದಿಯೂರಿನ ಅನಂತ ಶಯನ ಸಭಾಭವನದಲ್ಲಿ ಮಂಗಳವಾರ ಸಮಾನ ಮನಸ್ಕ ಸೌಂದರ್ಯ ತಜ್ಞೆಯರ ಒಕ್ಕೂಟದ ನೇತೃತ್ವದಲ್ಲಿ ಏಕದಿನ ಸೌಂದರ್ಯ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಾಗಾರವು ನಾಡಿನ ವಿವಿಧೆಡೆಗಳಿಂದ ಆಗಮಿಸಿದ ಸೌಂದರ್ಯ ತಜ್ಞೆಯರಿಗೆ ತಾಂತ್ರಿಕ ಜ್ಞಾನ ವಿಸ್ತಾರ ಮಾಡುವ ಪ್ಲಾಟ್‌ಫಾರ್ಮ್‌ನಾಗಿ ಪರಿಣಮಿಸಿತು.
ಕಾರ್ಯಕ್ರಮವನ್ನು ಉಡುಪಿಯ ಹಿರಿಯ ಸೌಂದರ್ಯ ತಜ್ಞೆಯರಾದ ಎಡ್ನ ಜತ್ತನ್ನ, ಜಯಶ್ರೀ ಭಂಡಾರಿ, ಲತಾ ವಾದಿರಾಜ್ ಮತ್ತು ಶರ್ಲಿ ಅಮ್ಮನ್ನ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಾಗಾರದಲ್ಲಿ ಮಂಗಳೂರು ಮೂಲದ ಖ್ಯಾತ ಸೌಂದರ್ಯ ತಜ್ಞ ಮನು ಮುರಳೀಧರ್ ಅವರು ಆಧುನಿಕ ತಂತ್ರಜ್ಞಾನ ಬಳಸಿಕೊಂಡ ಮೇಕಪ್ ವಿಧಾನಗಳು, ವಿವಿಧ ತ್ವಚಾ ಪ್ರಕಾರಗಳಿಗೆ ತಕ್ಕಂತೆ ಮೇಕಪ್ ಆಯ್ಕೆ, ಗ್ರಾಹಕ ತೃಪ್ತಿಗಾಗಿ ಅನುಸರಿಸಬಹುದಾದ ನವೀನ ವಿಧಾನಗಳು ಕುರಿತು ವಿವರವಾಗಿ ಉಪನ್ಯಾಸ ನೀಡಿದರು. ಭಾಗವಹಿಸಿದ ತಜ್ಞೆಯರೊಂದಿಗೆ ಆಳವಾದ ಸಂವಾದ ನಡೆಸಿ ಅನುಭವ ಹಂಚಿಕೊಂಡರು.
ಈ ಕಾರ್ಯಾಗಾರದಲ್ಲಿ ಉಡುಪಿ, ದ. ಕನ್ನಡ, ಉ. ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದ 300 ಕ್ಕೂ ಹೆಚ್ಚು ಸೌಂದರ್ಯ ತಜ್ಞೆಯರು ಭಾಗವಹಿಸಿ ಹೊಸತನ್ನು ಕಲಿಯುವ ಉತ್ತಮ ಅವಕಾಶವನ್ನು ಪಡೆದುಕೊಂಡರು.
ಕಾರ್ಯಕ್ರಮದ ಯಶಸ್ವೀ ಆಯೋಜನೆಯನ್ನು ರೋಸ್ ಬ್ಯೂಟಿ ಪಾರ್ಲರ್ (ಎಡ್ನ ಜತ್ತನ್ನ), ಲಕ್ಷ್ಮಿ ಬ್ಯೂಟಿ ವರ್ಲ್ಡ್, ರೋಸ್ ಕಾಸ್ಮೆಟಿಕ್ಸ್ ಹಾಗೂ ಪಟೇಲ್ ಕುಂದಾಪುರ ಅವರು ಜಂಟಿಯಾಗಿ ನಿರ್ವಹಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.