



ಉಡುಪಿ: ಚಂಡೀಗಢ ಸರ್ಕಾರದ ಮುಖ್ಯ ಕಾರ್ಯದರ್ಶಿಯಾದ ಎಚ್. ರಾಜೇಶ್ ಪ್ರಸಾದ್ ಅವರು ಮೊದಲ ಬಾರಿಗೆ ತವರೂರು ಉಡುಪಿ ಜಿಲ್ಲೆಗೆ ಆಗಮಿಸುತ್ತಿದ್ದು ಅವರ ಅಭಿಮಾನಿ ಬಳಗ ಮತ್ತು ಹಲವು ಸಂಘ ಸಂಸ್ಥೆಗಳ ವತಿಯಿಂದ ಅವರನ್ನು ಅಭಿನಂದಿಸುವ ಸಮಾರಂಭ ನ. 15 ರಂದು ಶನಿವಾರ ಸಂಜೆ 4 ಗಂಟೆಗೆ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ.ಸತೀಶ್ ಯು.ಪೈ.ಅಧ್ಯಕ್ಷರು ವಿಶ್ವಸ್ತ ಮಂಡಳಿ ಎಂ.ಜಿ.ಎಂ.ಕಾಲೇಜು ಉಡುಪಿ ಇವರು ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಣಿಪಾಲ ವಿವಿಯ ಕುಲಪತಿಗಳಾದ ಡಾ.ಎಚ್.ಎಸ್.ಬಲ್ಲಾಳ್, ಸಚಿವರಾದ ಕೇೂಟ ಶ್ರೀನಿವಾಸ ಪುಾಜಾರಿ, ಶಾಸಕರಾದ ಯಶಪಾಲ್ ಸುವಣ೯ ,ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಉಡುಪಿ ಪೊಲೀಸ್ ಅಧಿಕ್ಷಕರಾದ ಹರಿರಾಮ ಶಂಕರ್ ಶಾಸಕರಾದ ವಿ ಸುನಿಲಕುಮಾರ್. ಗುಮೆ೯ಸುರೇಶ್ ಶೆಟ್ಟಿ ,ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ ಶಾಸಕರು ಬೈಂದೂರು. ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ,ಪ್ರಮೇೂದ್ ಮಧ್ವರಾಜ್ ಮಾಜಿ ಶಾಸಕ ರಘಪತಿ ಭಟ್, ಶ್ರೀಧರ ಆರ್.ಪೈ, ಸತೀಶ್ ಶೆಟ್ಟಿ ,ಪ್ರೊ.ವನಿತಾ ಮಯ್ಯ, ಕುಯಿಲಾಡಿ ಸುರೇಶ್ ನಾಯಕ್ ಮೊದಲಾದವರು ಭಾಗವಹಿಸಲಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.