logo
WhatsApp Image 2026-04-02 at 14.46.04.jpeg
hindalco everlast.jpeg

ʻರಾಮಾಯಣʼದ ಮೊದಲ ಟ್ರೈಲರ್ ಗೆ ಭರ್ಜರಿ ಪ್ರತಿಕ್ರಿಯೆ, ರಾವಣನಾಗಿ ಯಶ್ ಅಬ್ಬರ, ರಾಮನಾಗಿ ರಣಬೀರ್ ಕಪೂರ್ ಮಿಂಚು

ಟ್ರೆಂಡಿಂಗ್
share whatsappshare facebookshare telegram
30 Jul 2026
post image

ಭಾರತೀಯ ಸಿನಿ ರಂಗದ ಬಹುನಿರೀಕ್ಷಿತ ಪೌರಾಣಿಕ ಕಥೆ ಆಧರಿತ ಸಿನಿಮಾ ʻರಾಮಾಯಣʼದ ಮೊದಲ ಟ್ರೈಲರ್ ಇಂದು ಬ್ರಾಹ್ಮಿ ಮುಹೂರ್ತದಲ್ಲಿ ರಿಲೀಸ್ ಆಗಿದೆ. ರಾವಣನಾಗಿ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್, ರಾಮನಾಗಿ ರಣಬೀರ್ ಕಪೂರ್ ಅಬ್ಬರಿಸಿದ್ದಾರೆ. ಸಾಯಿ ಪಲ್ಲವಿ ಸೀತೆಯಾಗಿ ಮನಗೆದ್ದಿದ್ದು, ಹಾನ್ಸ್ ಜಿಮ್ಮರ್–ಎ.ಆರ್. ರೆಹಮಾನ್ ಸಂಗೀತ ಮತ್ತು ಭವ್ಯ VFX ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಬಹುನಿರೀಕ್ಷಿತ ಈ ಚಿತ್ರವು ಹಲವು ತಿಂಗಳಿಂದ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿತ್ತು.

ಇದೀಗ ಜುಲೈ 30 ರಂದು ಚಿತ್ರದ ಅದ್ಧೂರಿ ಟ್ರೈಲರ್ ಅನಾವರಣಗೊಂಡಿದ್ದು, ಸೂರ್ಯೋದಕ್ಕೂ ಮುನ್ನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟಿದೆ ಸಿನಿ ತಂಡ. ಬ್ರಾಹ್ಮಿ ಮುಹೂರ್ತದಲ್ಲಿ ಟ್ರೈಲರ್ ರಿಲೀಸ್ ಇಂದು ಬೆಳಗ್ಗೆ 4.15 ರ ಬ್ರಾಹ್ಮಿ ಮುಹೂರ್ತದಲ್ಲಿ ನಿರ್ಮಾಣ ಸಂಸ್ಥೆ ಟ್ರೈಲರ್ ಬಿಡುಗಡೆ ಮಾಡಿದೆ. ʻThe Ramayana Trailer. This is where the EPIC BEGINSʼ ಎಂಬ ಟ್ಯಾಗ್ಲೈನ್ನೊಂದಿಗೆ ಬಿಡುಗಡೆಯಾದ ಟ್ರೈಲರ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. 4 ನಿಮಿಷಗಳ ದೃಶ್ಯ ವೈಭವ ಸುಮಾರು 4 ನಿಮಿಷ 10 ಸೆಕೆಂಡುಗಳ ಅವಧಿಯ ಈ ಟ್ರೈಲರ್ನಲ್ಲಿ ಧರ್ಮ ಮತ್ತು ಅಧರ್ಮದ ನಡುವಿನ ಮಹಾಯುದ್ಧವನ್ನ ಅದ್ಭುತ ದೃಶ್ಯ ವೈಭವದೊಂದಿಗೆ ಕಟ್ಟಿಕೊಡಲಾಗಿದೆ. ಅತ್ಯದ್ಭುತ ವಿಎಫ್ಎಕ್ಸ್ ಹಾಗೂ ಯುದ್ಧದ ಭವ್ಯ ದೃಶಗಳು ಸಿನಿಮಾದ ಪ್ರಮುಖ ಆಕರ್ಷಣೆಯಾಗಿದೆ. ರಾವಣನಾಗಿ ಯಶ್ ಆರ್ಭಟ ಇನ್ನೂ ಟ್ರೈಲರ್ ಆರಂಭದಲ್ಲೇ ರಾವಣನಾಗಿ ಯಶ್ ಕಾಣಿಸಿಕೊಂಡಿದ್ದು, ಸಿಂಹಾಸನ ತನ್ನದಾಗಿಸಿಕೊಳ್ಳುವ ಅವರ ಭವ್ಯ ಪ್ರವೇಶ ಸಖತ್ ಥ್ರಿಲ್ ಆಗಿದೆ.

ಚಿನ್ನದ ಕವಚ, ಅದ್ಧೂರಿ ವೇಷಭೂಷಣ ಹಾಗೂ ಭಯಾನಕ ಅಭಿವ್ಯಕ್ತಿಗಳೊಂದಿಗೆ ಯಶ್ ವಿವಿಧ ಭಂಗಿಗಳಲ್ಲಿ ಕಾಣಿಸಿಕೊಂಡಿರೋದು ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಶ್ರೀರಾಮನಾಗಿ ರಣಬೀರ್, ಸೀತೆಯಾಗಿ ಸಾಯಿ ಪಲ್ಲವಿ ಇನ್ನೂ ಅಯೋಧ್ಯೆಯ ಸುಂದರ ದೃಶ್ಯಗಳ ನಡುವೆ ಸರಳ ಕೇಸರಿ ವಸ್ತ್ರ ಧರಿಸಿರುವ ರಣಬೀರ್ ಕಪೂರ್ ಶ್ರೀರಾಮನಾಗಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಾರೆ. ಬಳಿಕ ಧರ್ಮಕ್ಕಾಗಿ ಹೋರಾಡುವ ಯೋಧನಾಗಿ ಅವರ ಪಾತ್ರ ರೂಪುಗೊಳ್ಳುತ್ತದೆ.

ಇದರೊಂದಿಗೆ ಸಾಯಿ ಪಲ್ಲವಿ, ಸೀತೆ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ರಾಮ-ಸೀತೆಯ ಮನಮುಟ್ಟುವ ಕ್ಷಣಗಳ ಜೊತೆಗೆ, ವನವಾಸದ ಪಯಣ ಮತ್ತು ಲಕ್ಷ್ಮಣನಾಗಿ ರವಿ ದುಬೆ ಅವರ ಪಾತ್ರವೂ ಟ್ರೈಲರ್ನಲ್ಲಿ ಪ್ರಮುಖವಾಗಿ ಮೂಡಿಬಂದಿದೆ. ಲಂಕೆಯ ಅದ್ಭುತ ಲೋಕ ಟ್ರೈಲರ್ನಲ್ಲಿ ಚಿನ್ನದ ಲಂಕೆಯ ವೈಭವ, ಬೃಹತ್ ಸೇನೆಗಳು, ದೈತ್ಯ ರಾಕ್ಷಸರು ಹಾಗೂ ಪೌರಾಣಿಕ ಜೀವಿಗಳನ್ನ ಅದ್ಭುತ ವಿಎಫ್ಎಕ್ಸ್ ಮೂಲಕ ತೆರೆಗೆ ತಂದಿರೋದು ವಿಶೇಷವಾಗಿದೆ. ಕಥೆಯ ಪ್ರಮುಖ ಘಟ್ಟಗಳನ್ನ ಮಾತ್ರ ತೋರಿಸಿರುವ ಚಿತ್ರತಂಡ, ಚಿತ್ರದ ಕಥೆಯನ್ನು ಸಂಪೂರ್ಣವಾಗಿ ಬಹಿರಂಗಪಡಿಸದೇ ಸಸ್ಪೆನ್ಸ್ಗಳನ್ನ ಹಾಗೆಯೇ ಉಳಿಸಿಕೊಂಡಿದೆ.

ಆಸ್ಕರ್ ಪ್ರಶಸ್ತಿ ವಿಜೇತರಾದ ಹಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಅವರ ಸಂಗೀತಕ್ಕೆ ಫ್ಯಾನ್ಸ್ ತಲೆದೂಗಿದ್ದಾರೆ. ಒಟ್ಟಿನಲ್ಲಿ ಸುಮಾರು 4,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ‘ರಾಮಾಯಣ’ ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಹಾಗೂ ಮಹತ್ವಾಕಾಂಕ್ಷೆಯ ಚಿತ್ರಗಳಲ್ಲಿ ಒಂದಾಗಿದೆ. ಪೌರಾಣಿಕ ಚಿತ್ರಗಳ ನಿರೂಪಣೆಗೆ ಹೊಸ ಆಯಾಮ ನೀಡುವ ಈ ಸಿನಿಮಾ, ದೀಪಾವಳಿ ವೇಳೆಗೆ ತೆರೆಗೆ ಬರುವ ನಿರೀಕ್ಷೆಯಿದೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.