ರೋಬಾಟ್ಗಳು ಈಗ ಎಲ್ಲಾ ಕ್ಷೇತ್ರಗಳಿಗೂ ಕಾಲಿಡುತ್ತಿದ್ದು, ಹೊಸ ಪ್ರಯೋಗವೊಂದರಲ್ಲಿ ರೋಬೋ ಶ್ವಾನವನ್ನು ಬಳಸಿ ಫುಡ್ ಡೆಲಿವರಿ ಮಾಡುವಲ್ಲಿ ಆಹಾರ ವಿತರಣಾ ಕಂಪನಿ ಯಶಸ್ವಿಯಾಗಿದೆ.
ಡಚ್ ಮೂಲದ ಬಹುರಾಷ್ಟ್ರೀಯ ಆಹಾರ ವಿತರಣಾ ಕಂಪನಿ ಜಸ್ಟ್ ಈಟ್ ಟೇಕ್ಅವೇ ಡಾಟ್ ಕಾಮ್ ಸ್ವಿಟ್ಜರ್ಲ್ಯಾಂಡ್ನ ರೋಬೋಟಿಕ್ಸ್ ಕಂಪನಿಯ ಸಹಯೋಗದೊಂದಿಗೆ ಸ್ವಿಟ್ಜರ್ಲ್ಯಾಂಡ್ನ ಜ್ಯೂರಿಚ್ನಲ್ಲಿ ಪ್ರಾಯೋಗಿಕವಾಗಿ ಫುಡ್ ಡೆಲಿವರಿ ಆರಂಭಿಸಿದೆ.
ಕೃತಕ ಬುದ್ಧಿಮತ್ತೆಯನ್ನು ಆಧರಿಸಿ ಕಾರ್ಯನಿರ್ವಹಿಸುವ ಈ ರೋಬೋ ಶ್ವಾನಗಳ ಕಾಲುಗಳಿಗೆ ಚಕ್ರ ಅಳವಡಿಸಲಾಗಿದ್ದು, ಇವು ಗಂಟೆಗೆ 15 ಕಿ.ಮೀ. ವೇಗದಲ್ಲಿ ಸಂಚರಿಸುತ್ತವೆ ಮತ್ತು ಮೆಟ್ಟಿಲುಗಳನ್ನೂ ಹತ್ತುತ್ತವೆ ಮತ್ತು ಇಳಿಯುತ್ತವೆ. ಎಐ ತಂತ್ರಜ್ಞಾನದಿಂದ ತನ್ನ ದಾರಿಯಲ್ಲಿರುವ ತಡೆತಡೆಗಳನ್ನು ಗುರುತಿಸಿ ಸುರಕ್ಷಿತವಾಗಿ ತನ್ನ ಗುರಿಯನ್ನು ತಲುಪುತ್ತವೆ.
ಈ ರೋಬೋ ಶ್ವಾನಗಳು ಮಳೆ, ಹಿಮ, ಬಿಸಿಲು ಸೇರಿದಂತೆ ಎಲ್ಲಾ ವಿಧದ ಹವಾಮಾನದಲ್ಲೂ ಕಾರ್ಯನಿರ್ವಹಿಸುತ್ತವೆ. ಕಮಾಂಡ್ ಸೆಂಟರ್ನಿಂದ ರೋಬೋಗಳ ಮೇಲೆ ನಿಗಾ ಇರಿಸಬಹುದು ಎಂದು ಕಂಪನಿ ತಿಳಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.