logo
AADYA ELECTRONICS.jpg
SHARADA TECHERS.jpeg
hindalco everlast.jpeg

ರೋಹನ್ ಕಾರ್ಪೊರೇಷನ್: ಬಾಲಿವುಡ್ ಶಾರೂಖ್‌ ಖಾನ್ ಆಧಿಕೃತ ಬ್ರಾಂಡ್ ಅಂಬಾಸಿಡರ್.

ಟ್ರೆಂಡಿಂಗ್
share whatsappshare facebookshare telegram
14 Jul 2025
post image

ಮಂಗಳೂರು: ಕರ್ನಾಟಕದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ, ಮಂಗಳೂರಿನ ಹೆಸರಾಂತ ಉದ್ಯಮ ಸಂಸ್ಥೆ ರೋಹನ್ ಕಾರ್ಪೊರೇಷನ್ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್‌ ಖಾನ್ ಅವರನ್ನು ತನ್ನ ಆಧಿಕೃತ ಬ್ರಾಂಡ್ ಅಂಬಾಸಿಡರ್ ಆಗಿ ಜುಲೈ 12 ರಂದು ಘೋಷಣೆ ಮಾಡಿತು.

ಈ ಬಹು ನಿರೀಕ್ಷಿತ ಕಾರ್ಯಕ್ರಮವು, ಮಂಗಳೂರಿನ ಬಿಜೈ ಭಾರತ್ ಮಾಲ್‌ನಲ್ಲಿ ವಿಜೃಂಭಣೆಯಿಂದ ನಡೆಯಿತು. ಈ ಸಮಾರಂಭದಲ್ಲಿ ಜಿಲ್ಲೆಯ ಪ್ರಮುಖ ಮಾಧ್ಯಮ ಪ್ರತಿನಿಧಿಗಳು, ಸಾಮಾಜಿಕ ಮಾಧ್ಯಮ ಪ್ರಭಾವಿಗಳು, ಮತ್ತು ಸಿನಿಮಾ ಜಗತ್ತಿನ ತಾರೆಗಳು ಭಾಗವಹಿಸಿದ್ದರು.

ಈ ಘೋಷಣೆ ವಿಶೇಷ ಏಕೆಂದರೆ - ಇದು ಕರ್ನಾಟಕದಲ್ಲಿ ಮೊದಲ ಬಾರಿಗೆ ಶಾರೂಖ್‌ ಖಾನ್ ಅವರು ಯಾವುದೇ ಬ್ರಾಂಡ್‌ಗೆ ಅಂಬಾಸಿಡರ್ ಆಗಿರುವುದು. ಈ ಮೂಲಕ ರೋಹನ್ ಕಾರ್ಪೊರೇಷನ್ ಮಂಗಳೂರು ನಗರವನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.

ಸಮಾರಂಭದ ಪ್ರಮುಖ ಆಕರ್ಷಣೆ ಎಂದರೆ, ಬೃಹತ್ ಪರದೆಯ ಮೇಲೆ ಪ್ರದರ್ಶಿಸಲಾದ ಅಧಿಕೃತ ಬ್ರಾಂಡ್ ಅಂಬಾಸಿಡರ್ ವಿಡಿಯೋ (AV). ಈ ವಿಡಿಯೋದಲ್ಲಿ ರೋಹನ್ ಕಾರ್ಪೊರೇಷನ್‌ನ ಸ್ಫೂರ್ತಿದಾಯಕ ಪಯಣ ಮತ್ತು ಶಾರೂಖ್‌ ಖಾನ್ ಅವರ ಶ್ರಮ ಮತ್ತು ವ್ಯಕ್ತಿತ್ವ ತುಂಬಿದ ಯಶೋಗಾಥೆ ಅದ್ಭುತವಾಗಿ ಪ್ರಸ್ತುತಗೊಂಡಿತ್ತು.

ಸಂಸ್ಥಾಪಕರಾದ ಡಾ. ರೋಹನ್ ಮೊಂತೇರೊ ಅವರು ಈ ಸಂದರ್ಭದಲ್ಲಿ ಮಾತನಾಡಿ “ಶಾರೂಖ್‌ ಖಾನ್ ಅವರಂತಹ ಪ್ರಭಾವಿ ವ್ಯಕ್ತಿತ್ವ ನಮ್ಮ ಜೊತೆಗೆ ಇರುವುದರಿಂದ, ನಮ್ಮ ಯಶಸ್ಸನ್ನು ಇನ್ನೂ ಎತ್ತರಕ್ಕೆ ವಿಸ್ತರಿಸುವಲ್ಲಿ ಹೊಸ ಆತ್ಮವಿಶ್ವಾಸ ಬಂದಿದೆ. ಇದು ಶಕ್ತಿಯುತ ಸಹಭಾಗಿತ್ವದ ಹೊಸ ಅಧ್ಯಾಯದ ಪ್ರಾರಂಭ” ಎಂದರು.

ಕಾರ್ಯಕ್ರಮವನ್ನು ಖ್ಯಾತ ನಿರೂಪಕಿ ರೀನಾ ಡಿಸೋಜಾ ಅವರು ಆಕರ್ಷಕವಾಗಿ ನಿರೂಪಿಸಿದರು.

ಈ ಘೋಷಣೆ ಕೇವಲ ಬ್ರಾಂಡ್ ಪ್ರಚಾರವಲ್ಲ, ಇದು ಮಂಗಳೂರಿನ ಅಭಿವೃದ್ಧಿಯ ಹಾದಿಯಲ್ಲಿ ಮತ್ತೊಂದು ಸಾಂದರ್ಭಿಕ ಹೆಜ್ಜೆ. 32 ವರ್ಷಗಳ ಅನುಭವ, 5000ಕ್ಕೂ ಹೆಚ್ಚು ಸಂತುಷ್ಟ ಕುಟುಂಬಗಳು, ಮತ್ತು 25ಕ್ಕೂ ಹೆಚ್ಚು ಯಶಸ್ವಿ ಯೋಜನೆಗಳೊಂದಿಗೆ, ರೋಹನ್ ಕಾರ್ಪೊರೇಷನ್ ಇದೀಗ ಒಂದು ಜಾಗತಿಕ ಹಾದಿಗೆ ಕಾಲಿಟ್ಟಿದೆ.

ರೋಹನ್ ಕಾರ್ಪೊರೇಷನ್ ಮತ್ತು ಶಾರೂಕ್ ಖಾನ್ ಅವರ ಈ ಮಹತ್ವದ ಹೆಜ್ಜೆ ಮಂಗಳೂರಿನ ಹೆಮ್ಮೆ ಮಾತ್ರವಲ್ಲ, ಕರ್ನಾಟಕದ ಗರಿಮೆಯ ಪ್ರತಿಬಿಂಬವಾಗಿದೆ.

SURAKSHA CLINIC.jpg
shri guru ayurveda industries.jpg
WhatsApp Image 2025-03-24 at 6.54.49 AM.jpeg
MCC Bank Website Ad English.jpg
WhatsApp Image 2025-01-13 at 14.53.16 (1).jpeg
WhatsApp Image 2024-10-09 at 8.05.11 PM.jpeg
WhatsApp Image 2024-04-29 at 2.40.38 PM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.