



ಚೆನ್ನೈ: ಕೊಡೈಕೆನಾಲ್ ಬಳಿಯ ಜಲಪಾತದಲ್ಲಿ ತನ್ನ ಗೆಳೆಯರ ಜೊತೆ ಸ್ನಾನ ಮಾಡುವ ವೇಳೆ ನೀರಿನ ರಭಸಕ್ಕೆ ಸಿಲುಕಿ ಕೊಯಮತ್ತೂರು ಮೂಲದ ವೈದ್ಯಕೀಯ ವಿದ್ಯಾರ್ಥಿಯೋರ್ವ ಕೊಚ್ಚಿ ಹೋಗಿದ್ದು ಇದಾದ ಮೂರು ದಿನಗಳ ಬಳಿಕ ನಾಪತ್ತೆಯಾಗಿದ್ದ ವೈದ್ಯ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊಯಮತ್ತೂರಿನ ಖಾಸಗಿ ವೈದ್ಯಕೀಯ ಕಾಲೇಜಿನ ನಾಲ್ಕನೇ ವರ್ಷದ ವಿದ್ಯಾರ್ಥಿಯಾಗಿರುವ ನಂದಕುಮಾರ್ (೨೧) ಮೃತ ದುರ್ದೈವಿ.
ನಂದ ಕುಮಾರ್ ತನ್ನ ಹನ್ನೊಂದು ಮಂದಿ ಗೆಳೆಯರ ಜೊತೆ ಕಳೆದ ಶನಿವಾರ ಕೊಯಮತ್ತೂರಿನಿಂದ ಕೊಡೈಕೆನಾಲ್‌ಗೆ ತೆರಳಿದ್ದಾರೆ ಈ ಸಂದರ್ಭ ಕೊಡೈಕೆನಾಲ್ ಬಳಿಯ ಅಂಜುವೀಡು ಜಲಪಾತಕ್ಕೆ ತೆರಳಿದ ತಂಡದಲ್ಲಿ ನಂದಕುಮಾರ್ ಹಾಗೂ ಕೆಲವರು ಜಲಪಾತದಲ್ಲಿ ಈಜಲು ಮುಂದಾಗಿದ್ದಾರೆ ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ನಂದಕುಮಾರ್ ಕೊಚ್ಚಿ ಹೋಗಿದ್ದ. ನಾಪತ್ತೆಯಾಗಿರುವ ನಂದಕುಮಾರ್ ಪತ್ತೆಗಾಗಿ ರಕ್ಷಣಾ ತಂಡ ಶನಿವಾರದಿಂದ ಕಾರ್ಯಾಚರಣೆ ನಡೆಸುತ್ತಿದ್ದು ಅದರಂತೆ ಮಂಗಳವಾರ ಸಂಜೆಯ ವೇಳೆಗೆ ಕಲ್ಲು ಬಂಡೆಗಳ ನಡುವೆ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಂಜುವೀಡು ಜಲಪಾತ ನೋಡಲು ಸುಂದರವಾಗಿ ಕಂಡರೂ ಮಳೆಗಾಲದಲ್ಲಿ ಅಷ್ಟೇ ಅಪಾಯಕಾರಿ ಜಲಪಾತವಾಗಿದೆ ಇದಕ್ಕೆಂದೇ ಅಧಿಕಾರಿಗಳು ಅಪಾಯಕಾರಿ ಸ್ಥಳಗಳಿಗೆ ತೆರಳದಂತೆ ಅಲ್ಲಲ್ಲಿ ಸೂಚನಾ ಫಲಕಗಳನ್ನು ಹಾಕಿದ್ದೂ ಆದರೂ ಪ್ರವಾಸಿಗರು ಎಚ್ಚರಿಕೆ ಫಲಕಗಳನ್ನು ಲೆಕ್ಕಿಸದೆ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನಂದ ಕುಮಾರ್ ವಿಚಾರದಲ್ಲೂ ಇದೇ ಆಗಿದ್ದು ಎಚ್ಚರಿಕೆ ಫಲಕ ಇದ್ದರೂ ವಿದ್ಯಾರ್ಥಿಗಳು ಇದನ್ನು ಲೆಕ್ಕಿಸದೆ ಅಪಾಯಕಾರಿ ಸ್ಥಳಕ್ಕೆ ತೆರಳಿ ತನ್ನ ಜೀವ ಕಳೆದುಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.