logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ನನ್ನ ಗ್ರಾಮ "ಈದು"

ಟ್ರೆಂಡಿಂಗ್
share whatsappshare facebookshare telegram
14 Jun 2024
post image

ಶ್ರೇಯಸ್ ಅಂಚನ್ ಪತ್ರಿಕೋಧ್ಯಮ ವಿಭಾಗ ಎಂ ಪಿ ಎಂ ಕಾಲೇಜು ಕಾರ್ಕಳ

ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಗಡಿ ಪ್ರದೇಶವಾದ ಈದು ಗ್ರಾಮ ಸಂಚಾರಿಸಲು,ವೀಕ್ಷಿಸಲು ಸುಂದರವಾದ ಗ್ರಾಮವಾಗಿದೆ. ಈ ಗ್ರಾಮದಲ್ಲಿ ಶ್ರೀ ಮೂಜಿಲ್ನಯ ದೈವಸ್ಥಾನ ಪ್ರಖ್ಯಾತವಾದ ದೈವಸ್ಥಾನವಾಗಿದೆ. ಈ ದೇವಸ್ಥಾನದ ವಿಶೇಷತೆ ಅಂದರೆ ಚಂದ್ರಮಾನ ಯುಗಾದಿಯಾಗಿ ಒಂಬತ್ತನೇ ದಿನದಂದು ಈ ದೈವಸ್ಥಾನದ ಜಾತ್ರೆ ಅದ್ದೂರಿಯಾಗಿ ನಡೆಯುತ್ತದೆ ಈ ಊರಿನವರಿಗೆ ಈ ಜಾತ್ರೆ ಅತ್ಯಂತ ದೊಡ್ಡ ಜಾತ್ರೆಯಾಗಿದೆ ಇಲ್ಲ ಸಪ್ತ ದೈವಗಳ ನೇಮ ನೋಡಲು ಊರ ಪರವೂರ ಜನಗಳು ಸೇರುತ್ತಾರೆ.

ಈದು ಗ್ರಾಮದಲ್ಲಿ ಅನೇಕ ದೈವ ದೇವಸ್ಥಾನಗಳನ್ನು ಕಾಣಬಹುದಾಗಿದೆ.

ಈದು ಗ್ರಾಮದಲ್ಲಿ ಕಂಬಳ 10 ವರ್ಷಗಳ ಹಿಂದೆ ಅದ್ದೂರಿಯಾಗಿ ನಡೆಯುತ್ತಿತ್ತು ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಕಾರಣಾಂತರಗಳಿಂದ ನಡೆಯದಿರುವುದು ಊರಿನವರಿಗೆ ಬೇಸರ ಸಂಗತಿಯಾಗಿದೆ

ಕೃಷಿ ಬೆಳೆಗಳನ್ನು ಮಾಡುವುದರಿಂದ ಈ ಭಾಗದ ರೈತರು ಪ್ರಸಿದ್ಧಿಗೊಂಡಿದ್ದಾರೆ ಇಲ್ಲಿಯ ಪ್ರಾಥಮಿಕ ಶಾಲೆಯ ಪರಿಸರ ಸರ್ವೋತ್ತೋಮುಖ ಅಭಿವೃದ್ಧಿಯಿಂದ ಕೂಡಿದೆ.

ಈದು ಗಾಮವೂ ನಕ್ಷಲ್ ಪೀಡಿತ ಪ್ರದೇಶವಾಗಿದೆ 20 ವರ್ಷಗಳ ಹಿಂದೆ ಇಬ್ಬರೂ ನಕ್ಸಲರ ಎನ್ಕೌಂಟರ್ ಕೂಡ ಈ ಗ್ರಾಮದಲ್ಲಿ ನಡೆದಿದೆ ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಯಾವುದೇ ಭಯವಿಲ್ಲದೆ ಜನರು ಜೀವನ ಸಾಗಿಸುತ್ತಿದ್ದಾರೆ. ಹಾಗೂ ಸಂಪೂರ್ಣ ಅಭಿವೃದ್ಧಿಯಿಂದ ಕಂಗೊಳಿಸುತ್ತಾ ಇದೆ. ಈದು ಗ್ರಾಮದಲ್ಲಿ ಹರಿಯುವ ಸುವರ್ಣ ನದಿಯು ಅಲ್ಲಿಯ ಜನರಿಗೆ ಜೀವ ನದಿ ಯಾಗಿದೆ.

WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.