logo
AADYA ELECTRONICS.jpg
SHARADA TECHERS.jpeg
hindalco everlast.jpeg

ಉಡುಪಿ ಯ ವಿದ್ಯಾ ಸರಸ್ವತಿಗೆ ಚಾಣಕ್ಯ ಅವಾರ್ಡ್ಸ್ ವಿಭಾಗದ 2024 ನೆ‌ ಸಾಲಿನ "ಫ್ಯಾಷನ್ ಕ್ಯಾಟಲಿಸ್ಟ್ ಆಫ್ ದ ಇಯರ್ ಪ್ರಶಸ್ತಿ ಯ ಗರಿ

ಟ್ರೆಂಡಿಂಗ್
share whatsappshare facebookshare telegram
12 Nov 2024
post image

ಮಂಗಳೂರು:

ಮಂಗಳೂರಿನ ಮೋತಿ ಮಹಲ್ ಹೋಟೆಲ್ ನಲ್ಲಿ ನ.8 ರಂದು ಪ್ರತಿಷ್ಟಿತ ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ (PRCI) ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಉಡುಪಿಯ ಫ್ಯಾಷನ್ ತಾರೆ ಶ್ರೀಮತಿ ವಿದ್ಯಾ ಸರಸ್ವತಿಯವರು ಚಾಣಕ್ಯ ಅವಾರ್ಡ್ಸ್ ವಿಭಾಗದ 2024 ನ "ಫ್ಯಾಷನ್ ಕ್ಯಾಟಲಿಸ್ಟ್ ಆಫ್ ದ ಇಯರ್" ಎಂಬ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಈ ಪ್ರಶಸ್ತಿಯನ್ನು " ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ "ಸಚಿವರಾದ ಶ್ರೀ ಶ್ರೀಪಾದ್ ನಾಯಕ್ ರವರ ಮೂಲಕ ನೀಡಲಾಯಿತು. ವಿದ್ಯಾ ಸರಸ್ವತಿಯವರು ಮಿಸೆಸ್ ಇಂಡಿಯಾ ಕರ್ಣಾಟಕದ "ವಾರಿಯರ್ ಕ್ವೀನ್" "ಟ್ರೆಡಿಷನಲ್ ವಿನ್ನರ್" ಆಗಿದ್ದಾರೆ. "2022ರ ಕ್ಯೂಟೆಸ್ಟ್ ಮೊಮ್" ಕಿರೀಟವನ್ನೂ ಪಡೆದಿದ್ದಾರೆ. ಜ್ಯುವೆಲ್ಲರಿ ಹಾಗೂ ಉಡುಪಿ ಕೈಮಗ್ಗ ಸೀರೆಯ ಮೊದಲ ರೂಪದರ್ಶಿಯೂ ಆಗಿದ್ದರು. 2023 ಹಾಗೂ 2024 ರಲ್ಲಿ ಉಡುಪಿ ಕೈಮಗ್ಗ ಸೀರೆಯನ್ನುಟ್ಟು ಸ್ವತಃ ರೂಪದರ್ಶಿಯಾಗಿ 2000 ಕ್ಯಾಲೆಂಡರ್ ನ್ನು ರಾಜ್ಯ ಅಂತರಾಜ್ಯಗಳಲ್ಲಿ ಹೋಗಿ ಜನರಿಗೆ ಹಂಚಿ ನೇಕಾರರಿಗೆ ಉತ್ತಮ ಪ್ರೋತ್ಸಾಹವನ್ನು ಕೊಟ್ಟಿದ್ದಾರೆ. ಅಲ್ಲದೆ ಸತತವಾಗಿ 4 ವರ್ಷಗಳಿಂದ ಫ್ಯಾಷನ್ ಲೋಕದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ . ಇವರು ಉಡುಪಿ ತುಳುಕೂಟದ ಮಾಜಿ ಉಪಾಧ್ಯಕ್ಷರು , 2024 ರ ಆಟಿ ಕೂಟದ ಸಂಚಾಲಕಿಯಾಗಿ

SURAKSHA CLINIC.jpg
shri guru ayurveda industries.jpg
WhatsApp Image 2025-03-24 at 6.54.49 AM.jpeg
MCC Bank Website Ad English.jpg
WhatsApp Image 2025-01-13 at 14.53.16 (1).jpeg
WhatsApp Image 2024-10-09 at 8.05.11 PM.jpeg
WhatsApp Image 2024-04-29 at 2.40.38 PM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.